newsics.com
ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೋಷಕರ ವಿರೋಧದ ನಡುವೆಯೂ ಮದುವೆಯಾದ ಯುವತಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮೃತ ಮಹಿಳೆಯನ್ನು ಸ್ಪಂದನಾ (24) ಎಂದು ಗುರುತಿಸಲಾಗಿದೆ. ಮಹಿಳೆ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಸ್ಪಂದನಾ ಕುಟುಂಬಸ್ಥರು ಆರೋಪಿಸಿದ್ದಾರೆ .ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆದರೆ ಇದು ಕೊಲೆ ಎಂದು ಸ್ಪಂದನಾ ಕುಟುಂಬದವರು ಆರೋಪಿಸಿದ್ದಾರೆ.
ಸ್ಪಂದನಾ ಕೊನೆಯದಾಗಿ ತನ್ನ ತಂಗಿಗೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿದ್ದಾಳೆ. ಜುಲೈ 5ರಂದು ಸ್ಪಂದನಾ ತಂಗಿಗೆ ಏನು ಒಂದು ಮೆಸೇಜ್ ಮಾಡಿಲ್ಲ ಅಂತ ಕೇಳಿದ್ದಾಳೆ. ಇದಾದ ಬಳಿಕ ಜುಲೈ 9 ಬುಧವಾರ ಅಮ್ಮ ಹಾಗೂ ಅಪ್ಪನ ಆಧಾರ್ ಕಾರ್ಡ್ ಕೊಡು, ನಮ್ಮ ಆಫೀಸ್ನಲ್ಲಿ ಪಿಎಫ್ (PF) ಅಕೌಂಟ್ ಮಾಡುತ್ತಿದ್ದಾರೆ. ಅದಕ್ಕೆ ಡೀಟೇಲ್ಸ್ ಬೇಕು ಅಂತ ಹಾಕಿದ್ದಾಳೆ. ಇದಾದ ಬಳಿಕ ತಂಗಿ ನಾನು ಕ್ಲಾಸ್ನಲ್ಲಿ ಇದ್ದೇನೆ, ಆಮೇಲೆ ಮೆಸೇಜ್ ಮಾಡುತ್ತೇನೆ ಅಂತ ಹಾಕಿದ್ದಾಳೆ. ಇದಕ್ಕೆ ಮನೆಗೆ ಹೋಗಿ ಜಸ್ಟ್ ಫೋಟೋ ಕಳ್ಸು ಸಾಕು ಅಂತ ರಿಪ್ಲೈ ಕೊಟ್ಟಿದ್ದಾಳೆ. ಇದಾದ ಬಳಿಕ ನಿನ್ನೆ ಮತ್ತೆ ಮೆಸೇಜ್ ಮಾಡಿದ ಸ್ಪಂದನಾ, ನನ್ನ ಸಾವಿಗೆ ಕಾರಣ ಅಭಿ ಹಾಗೂ ಅವರ ಇಡೀ ಕುಟುಂಬ. ಜೊತೆಗೆ ವರ್ಕ್ ಸ್ಥಳದಲ್ಲಿ ಕೆಲಸ ಮಾಡುವ ಎಲ್ಲರ ಉದ್ಯೋಗಿಗಳು ಅಂತ ಕಳುಹಿಸಿದ್ದಾಳೆ.