newsics.com
ಬೆಂಗಳೂರು: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ವಿರುದ್ಧ ಪ್ರಕರಣದ ತನಿಖೆಗೆ ತಡೆ ನೀಡಿ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ MLC ರವಿಕುಮಾರ್ಗೆ ಮಧ್ಯಂತರ ರಿಲೀಫ್ ನೀಡಿದೆ.
ಜೂನ್ 30ರಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಮಹದೇವಪುರ ವಲಯದಲ್ಲಿ ದಲಿತರ ಭೂಮಿಯನ್ನ ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ ಅಂತಾ ಆರೋಪಿಸಿತ್ತು. ಇದರ ವಿರುದ್ಧ ದೂರು ಕೊಡಲು ಹಲವು ಬಾರಿ ಹೋದಾಗ್ಲೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಿಕ್ಕಿರಲಿಲ್ವಂತೆ.
ವಿಧಾನಸೌಧ ಭದ್ರತೆ ಉಪ ಪೊಲೀಸ್ ಆಯುಕ್ತ ಎಂ.ಎನ್ ಕರಿಬಸವನಗೌಡ ಅವರೊಂದಿಗೆ ಛಲವಾದಿ ಮಾತನಾಡ್ತಿದ್ರು. ಆಗ ಬಿಜೆಪಿ ಲೀಡರ್ ಮುನಿಸ್ವಾಮಿ, ಚೀಫ್ ಸೆಕ್ರೆಟರಿ ಬರೀ ಕರ್ನಾಟಕಕ್ಕಾ ಇಲ್ಲ ಮುಖ್ಯಮಂತ್ರಿಗಳಿಗಾ ಅಂತಾ ಪ್ರಶ್ನಿಸಿದ್ರು. ಈ ಮಾತಿಗೆ ಮಾತು ಜೋಡಿಸಿದ ಎನ್. ರವಿಕುಮಾರ್, ಅಸಭ್ಯ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎನ್.ರವಿಕುಮಾರ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು.
https://www.newsics.com/2025/07/25/woman-falls-victim-to-dowry-harassment/