Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Lifestyle style ನಿದ್ರೆಯಲ್ಲಿರುವಾಗ ಸಡನ್ನಾಗಿ ಎಚ್ಚರಗೊಳ್ಳುವ ಸಮಸ್ಯೆ ಇದೆನಾ? ಹಾಗಾದ್ರೆ ಎಚ್ಚರಿಕೆ
ಆರೋಗ್ಯಲೈಫ್‌ಸ್ಟೈಲ್

Lifestyle style ನಿದ್ರೆಯಲ್ಲಿರುವಾಗ ಸಡನ್ನಾಗಿ ಎಚ್ಚರಗೊಳ್ಳುವ ಸಮಸ್ಯೆ ಇದೆನಾ? ಹಾಗಾದ್ರೆ ಎಚ್ಚರಿಕೆ

Share
3 Min Read
SHARE

newsics.com

ನಿದ್ರೆ ಮಾಡುವಾಗ ನಮಗೆ ಲೋಕದ ಪರಿವಿರುವುದಿಲ್ಲ. ಆದರೆ ಕೆಲವೊಮ್ಮೆ ನಿದ್ರೆ ಮಾಡುವಾಗ ಇದ್ದಕ್ಕಿದ್ದಂತೆ ಯಾರೋ ನಮ್ಮನ್ನು ಕೆಳಗೆ ಎಳೆದಂತಾಗುವುದು ಅಥವಾ ಎತ್ತರದಿಂದ ಬೀಳುವಂತಾಗುವುದು ಹೀಗೆ ನಾನಾ ರೀತಿಯ ಅನುಭವಗಳಾಗಿರುತ್ತವೆ. ಮಾತ್ರವಲ್ಲ ಕೆಲವೊಮ್ಮೆ ದೇಹ ಒಮ್ಮೆ ನಡುಗಿದಂತಾಗಿ ಎಚ್ಚರವಾಗುತ್ತದೆ.
ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಹಿಪ್ನಿಕ್ ಜರ್ಕ್ ಅಥವಾ ಸ್ಲೀಪ್ ಸ್ಟಾರ್ಟ್ ಎಂದು ಕರೆಯಲಾಗುತ್ತದೆ. ಇದು ದೇಹ ನಿದ್ರೆಗೆ ಪ್ರವೇಶಿಸುವ ಪ್ರಕ್ರಿಯೆ ಭಾಗ ಅಥವಾ ಸಾಮಾನ್ಯ ನರವೈಜ್ಞಾನಿಕ ಪ್ರತಿಕ್ರಿಯೆ. ಸಂಶೋಧನೆಯ ಪ್ರಕಾರ, ಸುಮಾರು 60- 70% ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಹೆಚ್ಚು ಬಾರಿ ಇದನ್ನು ಅನುಭವಿಸಿರುತ್ತಾರೆ. ಆದರೆ ಈ ರೀತಿ ದೇಹ ಒಮ್ಮೆಲೇ ನಡುಗುವುದಕ್ಕೆ ಕಾರಣವಿದೆ.
ಡಾ. ದಲ್ಜೀತ್ ಸಿಂಗ್ ಹೇಳುವ ಪ್ರಕಾರ, ನಮ್ಮ ದೇಹ ಆಳವಾದ ನಿದ್ರೆಗೆ ಜಾರುವಾಗ, ದೇಹದ ಸ್ನಾಯುಗಳು ಕ್ರಮೇಣ ವಿಶ್ರಾಂತಿ ಪಡೆಯುತ್ತವೆ. ಕೆಲವೊಮ್ಮೆ, ಮೆದುಳು ಈ ವಿಶ್ರಾಂತಿಯನ್ನು ಗಂಭೀರ ಅಪಾಯದ ಸಂಕೇತ ಎಂದುಕೊಂಡು, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಹಾಗಾಗಿ ಅದಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತದೆ. ಆಗ ದೇಹ ಒಮ್ಮೆ ನಡುಗಿದಂತಾಗುತ್ತದೆ, ಇದರಿಂದ ನಾವು ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತೇವೆ. ಇದನ್ನು ಹಿಪ್ನಿಕ್ ಜರ್ಕ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ದೇಹಕ್ಕೆ ಹಾನಿಕಾರಕವಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ಇದು ಪದೇ ಪದೇ ಸಂಭವಿಸಬಹುದು, ನಿದ್ರೆಗೆ ಅಡ್ಡಿಪಡಿಸಿ ಮರುದಿನದ ಆಯಾಸಕ್ಕೆ ಕಾರಣವಾಗಬಹುದು.
ನಿದ್ರೆ ಮಾಡುವಾಗ ಕಂಡುಬರುವ ನಡುಕಕ್ಕೆ ಸಂಭವನೀಯ ಕಾರಣಗಳು:
ನಿರಂತರ ಕೆಲಸ ಮತ್ತು ಸಾಕಷ್ಟು ನಿದ್ರೆ ಇಲ್ಲದಿರುವುದು ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿಸುತ್ತದೆ, ಇದರಿಂದ ನಿದ್ರಿಸಲು ಕಷ್ಟವಾಗುತ್ತದೆ.
ಕೆಫೀನ್ ಅಥವಾ ನಿಕೋಟಿನ್‌ನ ಅತಿಯಾದ ಸೇವನೆ ಮೆದುಳಿನ ನರಗಳನ್ನು ಉತ್ತೇಜಿಸುತ್ತದೆ ಮತ್ತು ಚೆನ್ನಾಗಿ ನಿದ್ರೆ ಮಾಡುವುದಕ್ಕೆ ತೊಂದರೆಯಾಗುತ್ತದೆ.
ಸಾಮಾನ್ಯವಾಗಿ ಮಾನಸಿಕ ಒತ್ತಡವು ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದರಿಂದ ವಿಶ್ರಾಂತಿ ಪಡೆಯಲು ಕಷ್ಟವಾಗುತ್ತದೆ ಮತ್ತು ನಡುಕಕ್ಕೆ ಕಾರಣವಾಗುತ್ತದೆ.
ಹೆಚ್ಚು ಹೊತ್ತು ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ಅಥವಾ ಟಿವಿಗಳು ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಅನ್ನು ನಿಗ್ರಹಿಸುತ್ತದೆ, ಇದು ನಿದ್ರೆಯ ಗುಣಮಟ್ಟವನ್ನು ಹದಗೆಡಿಸುತ್ತದೆ.
ಕೆಲವು ವ್ಯಕ್ತಿಗಳಲ್ಲಿ, ನರವೈಜ್ಞಾನಿಕ ವ್ಯವಸ್ಥೆಯು ಸಾಮಾನ್ಯಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ, ಇದು ಈ ಜರ್ಕ್‌ಗಳನ್ನು ಪದೇ ಪದೇ ಸಂಭವಿಸುವುದಕ್ಕೆ ಕಾರಣವಾಗುತ್ತದೆ.
ಇದು ಗಂಭೀರ ಅನಾರೋಗ್ಯದ ಸಂಕೇತವೇ?
ಹೆಚ್ಚಿನ ಸಂದರ್ಭಗಳಲ್ಲಿ, ನಿದ್ರೆಯ ಸಮಯದಲ್ಲಿ ಜರ್ಕಿಂಗ್ ಸಾಮಾನ್ಯ, ಆದರೆ ಈ ರೀತಿ ಪ್ರತಿ ರಾತ್ರಿ ಆಗುತ್ತಿದ್ದರೆ, ನಿದ್ರೆಯ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಅಥವಾ ಉಸಿರಾಟದ ತೊಂದರೆ, ತ್ವರಿತ ಹೃದಯ ಬಡಿತ, ಆತಂಕ ಅಥವಾ ಬೆವರುವಿಕೆಯಂತಹ ಲಕ್ಷಣಗಳೊಂದಿಗೆ ಕಂಡುಬರುವುದು ಗಂಭೀರ ಸಂಕೇತವಾಗಿರಬಹುದು. ಅಂತಹ ಲಕ್ಷಣಗಳು ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್, ಸ್ಲೀಪ್ ಅಪ್ನಿಯಾ ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳ ಭಾಗವಾಗಿರಬಹುದು. ಆದ್ದರಿಂದ, ಜರ್ಕಿಂಗ್ ಪದೇ ಪದೇ ಸಂಭವಿಸಿ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನಿದ್ರೆಯ ಸಮಯದಲ್ಲಿ ಉಂಟಾಗುವ ಜರ್ಕಿಂಗ್ ಅನ್ನು ತಪ್ಪಿಸುವುದು ಹೇಗೆ?
ನಿದ್ರೆಯ ಸಮಯದಲ್ಲಿ ಸಡನ್ನಾಗಿ ಉಂಟಾಗುವ ಜರ್ಕಿಂಗ್ ಅನ್ನು ತಪ್ಪಿಸಲು, ನಿದ್ರೆಯಲ್ಲಿ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳುವುದು. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮಲಗುವ ಎರಡು ಗಂಟೆಗಳ ಮೊದಲು ಕೆಫೀನ್, ಆಲ್ಕೋಹಾಲ್ ಮತ್ತು ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದನ್ನು ತಪ್ಪಿಸಬೇಕು. ಜೊತೆಗೆ ತಡರಾತ್ರಿ ವರೆಗೆ ಫೋನ್, ಲ್ಯಾಪ್ಟಾಪ್ ಅಥವಾ ಪರದೆಗಳನ್ನು ನೋಡುವ ಅಭ್ಯಾಸವನ್ನು ಕಡಿಮೆ ಮಾಡಿ ಇದರ ಬದಲಾಗಿ ಪುಸ್ತಕವನ್ನು ಓದಿ ಅಥವಾ ಒಳ್ಳೆಯ ಸಂಗೀತವನ್ನು ಕೇಳಿ. ಮನಸ್ಸನ್ನು ಶಾಂತಗೊಳಿಸಲು ಮಲಗುವ ಮೊದಲು ಆಳವಾದ ಉಸಿರಾಟ ಅಥವಾ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ದೇಹ ಮತ್ತು ಮನಸ್ಸು ಎರಡೂ ಸರಿಯಾಗಿ ವಿಶ್ರಾಂತಿ ಪಡೆಯಲು ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.

Lokayukta Raid ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ

TAGGED:Do you know what causes the jerking problem that causes you to wake up suddenly while in a deep sleep?
Share This Article
Facebook Twitter Copy Link Print
Previous Article Lokayukta Raid ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ
Next Article Weak password ದುರ್ಬಲ ಪಾಸ್ವರ್ಡ್ ನಿಂದಾಗಿ 158 ವರ್ಷ ಹಳೆಯ ಯುಕೆ ಕಂಪನಿ ಕ್ಲೋಸ್; 700 ಜನಕ್ಕೆ ಜಾಬ್ ಇಲ್ಲ |

Popular Posts

C M Vijay Last Film Jananayagan Release ಬೆಂಗಳೂರಿನಲ್ಲೂ ‘ಜನ ನಾಯಕನ್’ ಜ್ವರ: ವಿಜಯ್ ಅವರ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?