newsics.com
ಮುಂಬೈ: ಹೈಕೋರ್ಟ್ ಆದೇಶದಂತೆ ಧಾರ್ಮಿಕ ಕಟ್ಟಡಗಳಲ್ಲಿ ಶಾಶ್ವತವಾಗಿ ಅಳವಡಿಸಿರುವ ಎಲ್ಲ ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ.
ಮುಂಬೈನಲ್ಲಿ ಯಾವುದೇ ನಿರ್ಧಿಷ್ಟ ಸಮುದಾಯವನ್ನು ಮಾತ್ರ ಪರಿಗಣಿಸಿಲ್ಲ. ಎಲ್ಲರಿಗೂ ಇದು ಅನ್ವಯವಾಗುವಂತೆ ಧ್ವನಿವರ್ಧಕಗಳನ್ನ ತೆಗೆದು ಹಾಕಲಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳ ದೇವಾಲಯಗಳ ಮೇಲಿನ ಮೈಕ್ಗಳನ್ನ ತೆಗೆಯಲಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹಿಂದೂ ದೇವಾಲಯಗಳ ಮೇಲಿನ ಮೈಕ್ಗಳನ್ನು ತೆರವು ಮಾಡಿರುವುದು ವಿಶೇಷ ಎನಿಸಿದೆ. ಸಿಎಂ ದೇವೇಂದ್ರ ಫಡ್ನವೀಸ್ ಅವರು ನೀಡಿದಂತೆ ನಿರ್ದೇಶನವನ್ನು ಅಧಿಕಾರಿಗಳು ಸರಿಯಾಗಿ ಪಾಲನೆ ಮಾಡಿದ್ದಾರೆ. ಇದರಿಂದ ಯಾರಿಗೂ ನೋವುಂಟು ಮಾಡಿಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಹೇಳಿದ್ದಾರೆ.