ತನ್ನ ಸಂಗಾತಿಯನ್ನು ಕೊಂದ ಮನೆಗೆ ನುಗ್ಗಿ ಹೆಣ್ಣು ಹಾವೊಂದು ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಸಿಹೋರಾ ಗ್ರಾಮದ ನಿವಾಸಿ ಮನೋಜ್ ಅವರ ಪತ್ನಿ ಕಳೆದ ತಿಂಗಳಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಜುಲೈ 2ರಂದು ನಾಮಕರಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಕ್ಕೆ ಸಂಬಂಧಿಕರೆಲ್ಲಾ ಮನೆಗೆ ಬಂದಿದ್ದರು. ಹಾಗೆಯೇ ಮನೋಜ್ ಅವರ ಪತ್ನಿಯ ಸಹೋದರ ಸಚಿನ್ ಕೂಡ ಅಲ್ಲಿಗೆ ಬಂದಿದ್ದರು.
ಮನೆಯ ಒಳಗೆ ಕೋಣೆಯಲ್ಲಿ ಹಾವು ಇರುವುದನ್ನು ಕಂಡು ಬೆಚ್ಚಿಬಿದ್ದ ಸಚಿನ್ ಕೂಡಲೇ ದೊಣ್ಣೆಯಿಂದ ಗಂಡು ಹಾವನ್ನು ಹೊಡೆದು ಸಾಯಿಸಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಆ ಗಂಡು ಹಾವಿನ ಸಂಗಾತಿ ಮೂವರಿಗೆ ಕಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮನೋಜ್ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
https://www.newsics.com/2025/07/18/this-is-the-story-of-a-ceo-who-got-into-trouble-by-embracing-hr/