newsics.com
ಒಂದು ಅಪ್ಪುಗೆಯಿಂದ ಅಮೆರಿಕಾದ ಅಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ಅವರ ಡಿವೋರ್ಸ್ಗೆ ಕಾರಣವಾಗಿದೆ.
ಅಮೆರಿಕಾದ ಬೋಸ್ಟನ್ನಲ್ಲಿ ನಡೆಯುತ್ತಿದ್ದ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್ ವೇಳೆ ಸಿಇಓ ಆ್ಯಂಡಿ ಬೈರೋನ್ ತಮ್ಮ ಕಂಪನಿಯ ಮಹಿಳಾ ಹೆಚ್‌ಆರ್ ಕ್ರಿಸ್ಟೆನ್ ಕಬೋಟ್ರನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು.
ಕನ್ಸರ್ಟ್ನ ಕಿಸ್ ಕ್ಯಾಮ್ ಇವರತ್ತ ಪೋಕಸ್ ಮಾಡಿದೆ. ಇವರಿಬ್ಬರು ತಬ್ಬಿಕೊಂಡಿದ್ದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಕನ್ಸರ್ಟ್ನ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡಲಾಗಿದೆ. ಹೀಗೆ ತಾವು ತಬ್ಬಿಕೊಂಡಿರೋದು ದೊಡ್ಡ ಪರದೆಯಲ್ಲಿ ಪ್ರದರ್ಶನವಾಗುತ್ತಿರೋದು ಅರಿವಿಗೆ ಬರುತ್ತಿದ್ದಂತೆಯೇ ಇಬ್ಬರಿಗೂ ಶಾಕ್ ಆಗಿದೆ. ತಕ್ಷಣವೆ ಕೆಳಗೆ ಬಗ್ಗಿಕೊಂಡು ಕ್ಯಾಮರಾ ಕಣ್ಣಿನಿಂದ ಸಿಇಓ ಆ್ಯಂಡಿ ಬೈರೋನ್ ಎಸ್ಕೇಪ್ ಆಗುವ ಯತ್ನ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಆ್ಯಂಡಿ ಬೈರೋನ್ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಆಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ಪತ್ನಿ ಮೇಘನ್ ಕೆರಿಗನ್ ತನ್ನ ಸರ್ ನೇಮ್ ಫೇಸ್ಬುಕ್ನಿಂದ ತೆಗೆದು ಹಾಕಿದ್ದಾರೆ.
ಇದರಿಂದ ಆ್ಯಂಡಿ ಬೈರೋನ್ ಹಾಗೂ ಪತ್ನಿ ಮೇಘನ್ ಕೆರಿಗನ್ ಪರಸ್ಪರ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಶುರುವಾಗಿದೆ. ಒಂದು ಅಪ್ಪುಗೆ ಈಗ ಡಿವೋರ್ಸ್ಗೆ ಕಾರಣವಾಗುತ್ತಿದೆ.