newsics.com
ಉಪ್ಪು ಇಲ್ಲದೆ ಯಾವುದೇ ಆಹಾರವನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಉಪ್ಪು ಸ್ವಲ್ಪ ಕಡಿಮೆಯಾದರೂ ಕೂಡ ಪದಾರ್ಥದ ರುಚಿ ಹದಗೆಡುತ್ತದೆ. ಅಂತಹ ಉಪ್ಪಿನಿಂದ ಸಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ವರದಿಯೊಂದು ಸ್ಫೋಟಕ ಮಾಹಿತಿ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಹೇಳಿರುವಂತೆ, ಉಪ್ಪಿನ ಸಾಂಕ್ರಾಮಿಕ ರೋಗವು ಭಾರತದ ಹೆಚ್ಚಿನ ಜನಸಂಖ್ಯೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಎಚ್ಚರಿಸಿದೆ. ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಸೇರಿದಂತೆ ಮುಂತಾದ ಗಂಭೀರ ಸಮಸ್ಯೆಗಳು ಹೆಚ್ಚುತ್ತಿವೆ.
WHO ಮಾರ್ಗಸೂಚಿಗಳ ಪ್ರಕಾರ ವಯಸ್ಕರೊಬ್ಬರು ದಿನಕ್ಕೆ ಗರಿಷ್ಠ 5 ಗ್ರಾಂ ಉಪ್ಪನ್ನು ಸೇವಿಸಬೇಕೆಂದು ಹೇಳುತ್ತವೆ. ಆದ್ರೆ, ನಗರ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ವ್ಯಕ್ತಿಯು ದಿನಕ್ಕೆ ಸರಾಸರಿ 9.2 ಗ್ರಾಂ ಉಪ್ಪನ್ನು ಸೇವಿಸುತ್ತಾನೆ. ಗ್ರಾಮೀಣ ಪ್ರದೇಶಗಳಲ್ಲಿ, ಸರಾಸರಿ 5.6 ಗ್ರಾಂ ಸೇವಿಸಬೇಕು ಎಂದು ತಿಳಿಸಿದ್ದರೂ ಕೂಡ ಇಲ್ಲಿಯೂ ಅಧಿಕ ಪ್ರಮಾಣ ಉಪ್ಪನ್ನು ಸೇವಿಸುವುದನ್ನು ನಾವು ಕಾಣಬಹುದು.
ಉಪ್ಪು ಸೇವನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುವುದರಿಂದ ರಕ್ತದೊತ್ತಡ ಸುಮಾರು 7/4 mmHg ರಷ್ಟು ಕಡಿಮೆಯಾಗಬಹುದು ಎಂದು ವೈದ್ಯರು ಹೇಳುತ್ತಾರೆ. ನೀವು ಪ್ಯಾಕ್ ಮಾಡಿದ ತಿಂಡಿಗಳು, ನೂಡಲ್ಸ್ ಮತ್ತು ಫಾಸ್ಟ್ ಫುಡ್ ಅನ್ನು ಕಡಿಮೆ ಸೇವಿಸಬೇಕು. ಬೇಯಿಸಿದ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಉಪ್ಪು ನಮ್ಮ ಆಹಾರಕ್ಕೆ ಅತ್ಯಗತ್ಯವಾಗಿ ಬೇಕಾದ ಅಂಶವಾಗಿದೆ. ಆದರೆ, ಹೆಚ್ಚು ಉಪ್ಪು ಸೇವಿಸುವುದರಿಂದ ಹಲವಾರು ಸಮಸ್ಯೆಗಳು ಉಂಟಾಗಬಹುದು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ಬಿಳಿ ಉಪ್ಪು, ಕಪ್ಪು ಉಪ್ಪು, ಕಲ್ಲು ಉಪ್ಪು ಮತ್ತು ಗುಲಾಬಿ ಉಪ್ಪು ಹೀಗೆ ಪ್ರತಿಯೊಂದು ಉಪ್ಪು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಅದಾಗ್ಯೂ, ಅವುಗಳಲ್ಲಿ ಯಾವುದೂ ಅಧಿಕವಾಗಿ ದೇಹಕ್ಕೆ ಒಳ್ಳೆಯದಲ್ಲ. ಅನೇಕ ಜನರು ಹೆಚ್ಚು ಉಪ್ಪು ಇಲ್ಲದೆ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ. ಈ ಅಭ್ಯಾಸವು ಒಂದು ಹಂತದಲ್ಲಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂದು WHO ಕಳವಳ ವ್ಯಕ್ತಪಡಿಸಿದೆ.
How will world end : ಒಂದು ವೇಳೆ ಜನರು ಮಕ್ಕಳು ಹೆರುವುದನ್ನು ನಿಲ್ಲಿಸಿದರೆ ಏನಾಗುತ್ತೆ?; 99% ಜನರಿಗೆ ಗೊತ್ತಿಲ್ಲ