newsics.com
ಜೂನ್ 25 ರಂದು ಭಾರತದ ಶುಭಾಂಶು ಶುಕ್ಲಾ ಸೇರಿ ಒಟ್ಟು ನಾಲ್ವರು ಗಗನಯಾತ್ರಿಗಳು ಅಮೆರಿಕಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದಾರೆ.
ಗಗನಯಾದ ಭಾಗವಾದ ಆಕ್ಸಿಯಮ್ 4 ಬಾಹ್ಯಕಾಶ ಪ್ರಯೋಗದ ಎಲ್ಲಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಶುಭಾಂಶು ಶುಕ್ಲಾ ಬಾಹ್ಯಕಾಶದಿಂದ ಭೂಮಿಗೆ ಮರಳಲಿದ್ದಾರೆ.
ಸೋಮವಾರ ಸಂಜೆ 4:35ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (IIS) ಅನ್‌ಡಾಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು ನಾಳೆ ಮಧ್ಯಾಹ್ನ 2:25ಕ್ಕೆ ಡ್ರ‍್ಯಾಗನ್‌ಗೆ ಪ್ರವೇಶಿಸಲಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಗನಯಾತ್ರಿಗಳು ಕ್ಯಾಲಿಫೋರ್ನಿಯಾದ ಕಡಲತೀರಕ್ಕೆ ಬಂದಿಳಿಯಲಿದ್ದಾರೆ.
ಶುಭಾಂಶು ಶುಕ್ಲಾ ಮತ್ತು ಅವರ ಆಕ್ಸಿಯಮ್ -4 ಸಿಬ್ಬಂದಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 230 ಸೂರ್ಯೋದಯಗಳನ್ನ ವೀಕ್ಷಿಸಿದ್ದಾರೆ. ಆಕ್ಸಿಯಮ್ ಮಿಷನ್-4 ಸಿಬ್ಬಂದಿ ಭೂಮಿಯ ಸುತ್ತ ಸುಮಾರು 230 ಕಕ್ಷೆಗಳನ್ನ ಪೂರ್ಣಗೊಳಿಸಿದ್ದಾರೆ ಮತ್ತು 6 ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಅಧ್ಯಯನಗಳನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಆಕ್ಸಿಯಮ್ -4 ಗಗನಯಾತ್ರಿಗಳು 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಒಂದೇ ಕಾರ್ಯಾಚರಣೆಯಲ್ಲಿ ಐಎಸ್‌ಎಸ್‌ನಲ್ಲಿ ಇಷ್ಟೊಂದು ಪ್ರಯೋಗಗಳನ್ನು ನಡೆಸುವುದು ಒಂದು ದಾಖಲೆಯಾಗಿದೆ.