newsics.com
ಬುಲಂದ್ಶಹರ್: 15 ಅಡಿ ಉದ್ದದ ಭೀಮಾಕಾಯದ ಕಾಡು ಹಾವೊಂದನ್ನು ಮಕ್ಕಳು ಮೆರವಣಿಗೆ ಮಾಡಿರುವ ಘಟನೆಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾವನ್ನು ಮಕ್ಕಳ ಗುಂಪು ಕೈಯಲ್ಲಿ ಎತ್ತಿಹಿಡಿದು ಗ್ರಾಮದ ರಸ್ತೆಗಳಲ್ಲಿ ಸುಮಾರು 3 ಕಿಮೀ ಮೆರವಣಿಗೆ ಮಾಡಿದ್ದಾರೆ. ಹಾವನ್ನು ಹಿಡಿದು ಸೆಲ್ಫಿಗಳನ್ನು ತೆಗೆದುಕೊಂಡ ಮಕ್ಕಳ ಜೊತೆ ಜನರು ಗುಂಪುಗೂಡಿದ್ದಾರೆ. ವಿಡಿಯೊದಲ್ಲಿ ಈ ದೃಶ್ಯ ಸೆರೆಯಾಗಿದೆ.
ಭಾರತೀಯ ಕಲ್ಲು ಹಾವು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಇದನ್ನು ಹಿಡಿಯುವುದು ಅಥವಾ ಕಾಡುವುದು ಕಾನೂನುಬಾಹಿರವಾಗಿದೆ.ಮಕ್ಕಳು ಈ ಬೃಹತ್ ಸರೀಸೃಪವನ್ನು ಕೈಯಲ್ಲಿ ಹಿಡಿದು, ತಲೆ, ದೇಹ ಮತ್ತು ಬಾಲದ ಭಾಗವನ್ನು ಎತ್ತಿಹಿಡಿದು ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಕೆಲವರು ಹಾವನ್ನು ಹಿಡಿದರೆ, ಇನ್ನೂ ಕೆಲವರು ಅದರ ಪಕ್ಕದಲ್ಲಿ ಸಾಮಾನ್ಯವಾಗಿ ನಡೆದುಕೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಈ ಮಕ್ಕಳು ಸುಮಾರು 3 ಕಿಲೋಮೀಟರ್ ದೂರದವರೆಗೆ ಹಾವನ್ನು ಎತ್ತಿಹಿಡಿದು ಗ್ರಾಮದಾದ್ಯಂತ ಸಂಚರಿಸಿದ್ದಾರೆ.