Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ರೇಯಸಿ ಮತ್ತು 6 ತಿಂಗಳ ಮಗುವನ್ನು ಕತ್ತು ಸೀಳಿ ಬರ್ಬರ ಹತ್ಯೆ; ಆರೋಪಿ ಅಂದರ್
ದೇಶಪ್ರಮುಖ

ಪ್ರೇಯಸಿ ಮತ್ತು 6 ತಿಂಗಳ ಮಗುವನ್ನು ಕತ್ತು ಸೀಳಿ ಬರ್ಬರ ಹತ್ಯೆ; ಆರೋಪಿ ಅಂದರ್

Share
2 Min Read
SHARE

newsics.com

ನವದೆಹಲಿ; ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆರು ತಿಂಗಳ ಮಗುವನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಮಜ್ನುಕಾ ತಿಲ್ಲಾ ಪ್ರದೇಶದಲ್ಲಿ ನಡೆದಿದೆ.

ಉತ್ತರಾಖಂಡ ಮೂಲದ ನಿಖಿಲ್ ಎಂಬ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋನಾಲ್ ಹಾಗೂ ಆಕೆಯ 6 ತಿಂಗಳ ಮಗುವನ್ನು ನಿಖಿಲ್ ಎಂಬಾತ ಸರ್ಜಿಕಲ್ ಬ್ಲೇಡ್ನಿಂದ ಕೊಲ ಮಾಡಿದ್ದ, ನಂತರ ಸ್ಥಳದಿಂದ ಆರೋಪ ಪರಾರಿಯಾಗಿದ್ದ. ಆತ್ಮಹತ್ಯೆಗೂ ಯತ್ನಿಸಿದ್ದ ಎಂಬುದು ತಿಳಿದುಬಂದಿದೆ. ಕೊನೆಗೆ ಆತನನ್ನು ಹಲ್ದ್ವಾನಿಯಲ್ಲಿರುವ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ ಮತ್ತು ಸೋನಾಲ್ 2023ರಲ್ಲಿ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಆ ವರ್ಷದ ಕೊನೆಯಲ್ಲಿ ಆಕೆ ಗರ್ಭಿಣಿಯಾದಳು. ಪೊಲೀಸರ ಪ್ರಕಾರ, ಆಗ ಅವಿವಾಹಿತರಾಗಿದ್ದ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಇಬ್ಬರಿಗೂ ಮಗುವನ್ನು ಸಾಕಲು ಇಷ್ಟವಿರಲಿಲ್ಲ. ಆರಂಭದಲ್ಲಿ ಗರ್ಭಪಾತ ಬಯಸಿದ್ದರೂ ಅದು ಸಾಧ್ಯವಾಗಲಿಲ್ಲ, 2024ರಲ್ಲಿ ಮಗು ಜನಿಸಿತ್ತು.

ನಂತರ ದಂಪತಿ ಮಗುವನ್ನು ಅಲ್ಮೋರಾದಲ್ಲಿ ಅಪರಿಚಿತ ವ್ಯಕ್ತಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಹಣದಿಂದ ಅವರು ದೆಹಲಿಗೆ ಸ್ಥಳಾಂತರಗೊಂಡಿದ್ದರು. ಆರಂಭದಲ್ಲಿ ವಜೀರಾಬಾದ್ನಲ್ಲಿ ವಾಸಿಸುತ್ತಿದ್ದರು. ನಂತರ ಮಜ್ನುಕಾ ತಿಲ್ಲಾಗೆ ತೆರಳಿದ್ದರು. ದೆಹಲಿಯಲ್ಲಿರುವಾಗ ರಶ್ಮಿ ಎಂಬುವವರು ಪರಿಚಯವಾಗಿದ್ದರು. ಆಗಾಗ ಅವರ ಮನೆಗೆ ಹೋಗಿಬರುತ್ತಿದ್ದರು. ನಿಖಿಲ್ ಜತೆ ಜಗಳಾವಾದಾಗಲೆಲ್ಲಾ ಆಕೆ ಅವರ ಮನೆಗೆ ಹೋಗುತ್ತಿದ್ದಳು.

ಸೋನಲ್ ರಶ್ಮಿಯ ಪತಿ ಜತೆ ಸಂಬಂಧದ ಹೊಂದಿದ್ದಾಳೆ ಎಂಬ ಅನುಮಾನ ನಿಖಿಲ್ಗೆ ಬಂದಿತ್ತು. ಆಕೆ ಮತ್ತೆ ಗರ್ಭಿಣಿಯಾಗಿದ್ದರು. ಈ ಬಾರಿ, ನಿಖಿಲ್ ಮಗುವನ್ನು ಉಳಿಸಿಕೊಳ್ಳಲು ಬಯಸಿದ್ದಳು. ಹಾಗೆಯೇ ಮಗುವನ್ನು ತನ್ನ ಜತೆಯೇ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಳು. ದಾಳಿಗೂ ಮುನ್ನ ಸೋನಾಲ್ ರಶ್ಮಿ ಮನೆಯಲ್ಲಿ 20-25 ದಿನಗಳ ಕಾಲ ಇದ್ದಳು. ನಿಖಿಲ್ ಸೋನಾಳ್ನ್ನನು ಹಿಂದಿರುಗುವಂತೆ ಮನವೊಲಿಸಲು ಪ್ರಯತ್ನಿಸಿದ್ದ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ರಶ್ಮಿ ಹಾಗೂ ದುರ್ಗೇಶ್ ತಮ್ಮ ಮಗಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗಿದ್ದರು. ಆಗ ಸೋನಲ್ ಆರು ತಿಂಗಳ ಮಗು ಜತೆ ಮನೆಯಲ್ಲಿದ್ದರು. ಆಗ ನಿಖಿಲ್ ಅವರ ಮನೆಗೆ ಹೋಗಿ ಮೊದಲು ಸೋನಾಲ್ರನ್ನು ಕೊಲೆ ಮಾಡಿ. ಬಳಿಕ ಮಗುವಿನ ಬಾಯಿಗೆ ಟೇಪ್ ಅಂಟಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಬಳಿಕ ತನ್ನನ್ನು ಯಾರೂ ಪತ್ತೆ ಹಚ್ಚಬಾರದೆಂದು ಫೋನ್ ಅಲ್ಲಿಯೇ ಬಿಟ್ಟು ಹೋಗಿದ್ದಾನೆ.
ರಶ್ಮಿ ಮತ್ತು ದುರ್ಗೇಶ್ ತಮ್ಮ ಹಿರಿಯ ಮಗಳೊಂದಿಗೆ ಶಾಲೆಯಿಂದ ಹಿಂತಿರುಗಿದಾಗ, ರಕ್ತದ ಮಡುವಿನಲ್ಲಿ ಸೋನಾಲ್ ಮತ್ತು ಮಗುವಿನ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಿಖಿಲ್ ಮೊದಲು ತನ್ನ ಮನೆಗೆ ಹೋಗಿ, ಆತ್ಮಹತ್ಯೆಗೆ ಯತ್ನಿಸಿದ್ದ. ಅದು ವಿಫಲವಾದಾಗ, ದೆಹಲಿ ರೈಲು ನಿಲ್ದಾಣಕ್ಕೆ ಹೋಗಿ, ಹಲ್ದ್ವಾನಿ ಹೋಗುವ ಮೊದಲು ಬರೇಲಿಗೆ ಹೋಗಿದ್ದ. ಹಲ್ದ್ವಾನಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಾನೇ ಕೊಲೆ ಮಾಡಿರುವುದಾಗಿ ನಿಖಿಲ್ ಒಪ್ಪಿಕೊಂಡಿದ್ದಾನೆ.

ವಸತಿ ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ 7ನೇ ತರಗತಿ ವಿದ್ಯಾರ್ಥಿ

TAGGED:Andar brutally murdered his lover and 6-month-old child by slitting their throats; accused
Share This Article
Facebook Twitter Copy Link Print
Previous Article ವಸತಿ ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ 7ನೇ ತರಗತಿ ವಿದ್ಯಾರ್ಥಿ
Next Article Pro Kabaddi 2025: ಪ್ರೊ ಕಬಡ್ಡಿ ಲೀಗ್ಗೆ ಡೇಟ್ ಫಿಕ್ಸ್

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?