newsics.com
2008 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ, ಲಷ್ಕರ್ ಇ ತೊಯ್ಬಾ ಸಂಘಟನೆಯ ನಂಟು ಹೊಂದಿದ್ದು ನಾಸೀರ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂದಿಸಿದ್ದರು.
ಈ ನಡುವೆ ಪರಪ್ಪನ ಅಗ್ರಹಾರ ಜೈಲಿನ ವಾಸಿಯಾಗಿದ್ದ ನಾಸೀರ್ ಎಂಬಾತನ ಜೊತೆಗೆ ನಂಟು ಹೊಂದಿರುವ ಹಾಗೂ ಉಗ್ರಹನಿಗೆ ನೆರವು ನೀಡಿದ ಆರೋಪದಡಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾನಸೀಕ ವೈಧ್ಯರಾಗಿದ್ದ ಡಾ.ನಾಗರಾಜ್ ಅವರನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ.
ಮನೋವೈದ್ಯ ಡಾ.ನಾಗರಾಜ್ ಕೂಡಾ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದದವರು.ಡಾ.ನಾಗರಾಜ್ ಕೂಡಾ ಉಗ್ರ ನಸೀರ್ ಜೊತೆಗೆ ಸಂಪರ್ಕ ಹೊಂದಿದ್ದು ಆತನಿಗೆ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹ ಮಾಡಲು ಬೇಕಾದ ಫೋನ್, ಸಿಮ್ ಕಾರ್ಡ್ ಇನ್ನಿತರ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದರು ಅನ್ನೋ ಮಾಹಿತಿ NIA ಅಧಿಕಾರಿಗಳಿಗೆ ಸಿಕ್ಕಿದೆ. ಮನೋವೈದ್ಯ ನಾಗರಾಜ್ ಹತ್ತು ಸಾವಿರ ಬೆಲೆಯ ಮೊಬೈಲ್ ಫೋನ್ ನನ್ನು ಐವತ್ತು ಸಾವಿರ ರೂಪಾಯಿಗೆ ನಾಸೀರ್ ಗೆ ಮಾರಾಟ ಮಾಡುತ್ತಿದ್ದನಂತೆ. ಕೈದಿಗಳ ಮನಸ್ಸು ಬದಲಾಯಿಸಬೇಕಿದ್ದ ನಾಗರಾಜ್ ಖೈದಿಗಳ ಮನಸ್ಥಿತಿಗೆ ಬದಲಾಗಿದ್ದ, ಅವರಿಗೆ ಬೇಕಾದ ಸವಲತ್ತು ತಂದುಕೊಡುವ ಕೆಲಸಕ್ಕೆ ಇಳಿದು ತನ್ನ ಮನಸ್ಥಿತಿಯನ್ನೇ ಬದಲಾಯಿಸಿಕೊಂಡಿದ್ದಾನೆ.