Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗುಡ್​ ಮಾರ್ನಿಂಗ್​​ ಅಮ್ಮ ಅಂದಿದ್ದವಳು ಸಂಜೆ ಇಲ್ಲ.!ಬೆಂಗಳೂರಿನ ನೇಹಾ ರಾವ್​ಗೆ ದಿಢೀರ್ ಏನಾಯ್ತು?
ಕರ್ನಾಟಕದೇಶ

ಗುಡ್​ ಮಾರ್ನಿಂಗ್​​ ಅಮ್ಮ ಅಂದಿದ್ದವಳು ಸಂಜೆ ಇಲ್ಲ.!ಬೆಂಗಳೂರಿನ ನೇಹಾ ರಾವ್​ಗೆ ದಿಢೀರ್ ಏನಾಯ್ತು?

Share
2 Min Read
SHARE

newsics.com

ಓಡಿಶಾದಲ್ಲಿ ಕೆಲಸ ಮಾಡುತ್ತಿದ್ದ  ಬೆಂಗಳೂರಿನ ಹುಡುಗಿ ನಿಗೂಢವಾಗಿ   ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಹುಡುಗಿ ನೇಹಾ (23). ಅಪ್ಪ ಅಮ್ಮನಿಗೆ ಒಬ್ಬಳೇ ಒಬ್ಬಳು ಮಗಳು ನೇಹಾ.. ಇರೋ ಒಬ್ಬ ಮಗಳ ಮೇಲೆ ಪ್ರಾಣವನ್ನೆ ಇಟ್ಕೊಂಡಿದ್ರು. ಆದ್ರೀಗ ಈ ನೇಹಾ ಬದುಕು ದಾರುಣವಾಗಿ ಅಂತ್ಯ ಕಂಡಿದೆ. ನಿಗೂಢ ಸಾವಿನ ಸುತ್ತ ಅನುಮಾನಗಳ ಹುತ್ತವೇ ಬೆಳೆದಿದೆ.

ಮಂಗಳವಾರ ಬೆಳಗ್ಗೆ ಕೂಡ ನೇಹಾ ತಾಯಿ ಜೊತೆ ಮಾತಾಡಿದ್ಳು. ನೇಹಾ ತಾಯಿ ಎಂಟು ಗಂಟೆಗೆ ಗುಡ್​ ಮಾರ್ನಿಂಗ್​ ಅಂತ ಮೆಸೇಜ್​ ಮಾಡಿದ್ರು.. ಆಮೇಲೆ ನೇಹಾ ಕೂಡ ಗುಡ್​ ಮಾರ್ನಿಂಗ್ ಅಮ್ಮ ಅಂತ ರಿಪ್ಲೈ ಮಾಡಿದ್ಳು. ಗುಡ್​ ಮಾರ್ನಿಂಗ್​ ಅಮ್ಮ ಅಂತ ರಿಪ್ಲೈ ಬಂದ್ಮೇಲೆ 9 ಗಂಟೆಗೆ ಸುಮಾರಿಗೆ ನೇಹಾ ತಾಯಿ ಮತ್ತೆ ಎರಡು ಟೆಕ್ಸ್ಟ್​ ಕಳಿಸಿದ್ದಾರೆ. ಆದ್ರೆ ವಾಪಸ್​ ಏನೂ ರಿಪ್ಲೈ ಬಂದಿಲ್ಲ. ಕೊನೆಗೆ ಫೋನ್ ಮಾಡಿ ನೋಡಿದ್ದಾರೆ. ಫೋನ್ ಸ್ವೀಚ್​ ಆಫ್​ ಬಂದಿದೆ. ಕೆಲಸಕ್ಕೆ ಹೋಗಿರ್ತಾಳೆ ಅಂತ ನೇಹಾ ತಂದೆ ತಾಯಿ ಹೆಚ್ಚೆನೂ ತಲೆ ಕೆಡಿಸ್ಕೊಂಡಿಲ್ಲ. ನೋಡಿದ್ರೆ ಸಂಜೆಗೆ ಮಗಳು ಸತ್ತಿದ್ದಾಳೆ ಅನ್ನೋ ಸುದ್ದಿ  ತಿಳಿದಿದೆ.

 

ನೇಹಾ ತಂದೆ ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದ್ದಾರೆ. ತಂದೆ ತಾಯಿಗೆ ನೇಹಾ ಒಬ್ಬಳೇ ಮಗಳು.  ನೇಹಾಗೆ ಅಪ್ಪ ಅಮ್ಮನ ಜೊತೆ ಬೆಂಗಳೂರಿನಲ್ಲಿರೋದಕ್ಕೆ ಆಸೆ ಇತ್ತಂತೆ. ಹೀಗಾಗಿ ಮೂರು ವರ್ಷದ ಅಗ್ರಿಮೆಂಟ್ ಇದ್ರೂ ಒಂದೂವರೆ ವರ್ಷಕ್ಕೆ ಕೆಲಸ ಬಿಟ್ಟು ವಾಪಸ್ ಬೆಂಗಳೂರಿಗೆ ಬಂದಿದ್ಳು. ಬೆಂಗಳೂರಲ್ಲಿ ಎಂಟು ತಿಂಗಳು ಕಾಲ ಕೆಲಸಕ್ಕಾಗಿ ಅಲೆದಾಡಿ ಹುಡುಕಾಡಿ ಕೊನೆಗೆ ಎಲ್ಲೂ ಕೆಲಸ ಸಿಗದೇ ನಿರಾಸೆಗೊಂಡಿದ್ಳು. ಆದ್ರೆ ಬೆಂಗಳೂರಿನಲ್ಲಿ ಅವಳಂದುಕೊಂಡಂತ ಕೆಲಸ ಸಿಕ್ಕಿರಲ್ಲಿಲ್ಲ. ಹೀಗಾಗಿ ಕನಸಿನ ಮೂಟೆ ಹೊತ್ತು ಅನಿವಾರ್ಯ ಕಾರಣಗಳಿಂದ ಓಡಿಶಾಗೆ ಹೋಗಿ ಕೆಲಸ ಮಾಡ್ತಿದ್ಳು. ಜಿಂದಾಲ್​ ಸ್ಟೀಲ್​ ಆ್ಯಂಡ್​ ಪವರ್ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡ್ತಿದ್ಳು.

ಸದ್ಯ ಡೆತ್​ ನೋಟ್​ ಒಂದು ಸಿಕ್ಕಿದ್ದು, ಡೆತ್​ ನೋಟ್​ನಲ್ಲಿ ಹಲವು ವಿಚಾರಗಳನ್ನ ಉಲ್ಲೇಖಿಸಿರುವ ಬಗ್ಗೆ ಮಾಹಿತಿ ಇದೆ. ಓಡಿಶಾದಲ್ಲಿ ದೂರು ದಾಖಲಾಗಿದ್ದು, ಮಹಜರು ಕೆಲಸ ಎಲ್ಲ ಮುಗಿದಿದೆ. ಪೊಲೀಸರು ನಿಗೂಢ ಸಾವಿನ ತನಿಖೆ ನಡೆಸುತ್ತಿದ್ದಾರೆ.

https://www.newsics.com/2025/07/09/mlc-n-ravikumar-granted-bail-for-derogatory-remarks-against-shalini-rajneesh/

TAGGED:#girl #death #banglore #odisha #police
Share This Article
Facebook Twitter Copy Link Print
Previous Article ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ – MLC ಎನ್.ರವಿಕುಮಾರ್’ಗೆ ಜಾಮೀನು ಮಂಜೂರು
Next Article ಉಗ್ರನ ಹಣಕ್ಕೆ ಮನಸೋತನಾ ಮನೋವೈದ್ಯ..!

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?