newsics.com
ವಾಷಿಂಗ್ಟನ್ : ಅಮೆರಿಕ ಮೇಲೆ ಇತರೆ ರಾಷ್ಟ್ರಗಳು ಹೇರುತ್ತಿರುವ ಸುಂಕ ನೀತಿ ವಿರುದ್ದ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಇದೀಗ ಟ್ರಂಪ್ ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಆಮದುಗಳ ಮೇಲೆ 25% ತೆರಿಗೆ ವಿಧಿಸುವ ಸುಂಕ ಪತ್ರಗಳನ್ನು ಕಳುಹಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ ಸೋಶಿಯಲ್‌ನಲ್ಲಿ, ಹೊಸ ಸುಂಕ ದರಗಳನ್ನು ವಿಧಿಸುವ ತನ್ನ ಕ್ರಮದ ಬಗ್ಗೆ ಜಪಾನ್ ಪ್ರಧಾನಿ ಇಶಿಬಾ ಶಿಗೇರು ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರಿಗೆ ಕಳುಹಿಸಿದ ಪತ್ರಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ರಂಪ್ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು, ಇದರಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ಮೇಲೆ ಅಮೆರಿಕ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಲಿದೆ ಎಂದು ಹೇಳಲಾಗಿದೆ.
ಪತ್ರದಲ್ಲಿ ಏನಿದೆ
ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಬರೆದ ಪತ್ರದಲ್ಲಿ ಟ್ರಂಪ್ ಸ್ಪಷ್ಟವಾಗಿ, “ಆಗಸ್ಟ್ 1 ರಿಂದ, ಜಪಾನ್‌ನಿಂದ ಅಮೆರಿಕಕ್ಕೆ ಬರುವ ಪ್ರತಿಯೊಂದು ವಸ್ತುವು ಯಾವುದೇ ಉತ್ಪನ್ನವಾಗಿದ್ದರೂ ಸಹ 25% ಸುಂಕಕ್ಕೆ ಒಳಪಟ್ಟಿರುತ್ತದೆ. ಹೆಚ್ಚಿನ ಸುಂಕವನ್ನು ತಪ್ಪಿಸಲು ಯಾರಾದರೂ ಬುದ್ಧಿವಂತರಾಗಲು ಪ್ರಯತ್ನಿಸಿದರೆ, ಅವರ ಮೇಲೂ ಅದೇ ಭಾರೀ ಸುಂಕವನ್ನು ವಿಧಿಸಲಾಗುತ್ತದೆ” ಎಂದು ಹೇಳಿದ್ದಾರೆ.