newsics.com
ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ಕಿಕ್ ಅನ್ನು ಮದ್ಯ ಪ್ರಿಯರು ಇಳಿಸಿದ್ದಾರೆ. ಹೌದು ಕುಡುಕರು ಸರ್ಕಾರದ ಮೇಲೆ ತಿರುಗಿ ಬಿದ್ದಿದ್ದು. ಇದರಿಂದ ಮದ್ಯದ ಬೆಲೆ ಏರಿಕೆ ಮಾಡುವ ಮುಚ್ಚೆ ಮತ್ತೊಮ್ಮೆ ಯೋಚನೆ ಮಾಡುವಂತೆ ಮದ್ಯ ಪ್ರಿಯರು ಮಾಡಿದ್ದಾರೆ. ಬೆಲೆ ಏರಿಕೆಯ ಮೂಲಕ ಲಾಭ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದ ಸರ್ಕಾರಕ್ಕೇ ಇದೀಗ ಶಾಕ್ ಎದುರಾಗಿದೆ.ಕರ್ನಾಟಕದಲ್ಲಿ ಮದ್ಯದ ಬೆಲೆ ನಿರಂತರವಾಗಿ ಏರಿಕೆ ಆಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆ ಏರಿಕೆ ಆಗಿದೆ. ಇದೀಗ ಮದ್ಯದ ಆದಾಯವೂ ಸರ್ಕಾರಕ್ಕೆ ಕುಸಿತ ಕಂಡಿದೆ.
ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ನಿರಂತರವಾಗಿ ಶಾಕ್ ಕೊಡುತ್ತಿದ್ದ ಸರ್ಕಾರಕ್ಕೆ ಇದೀಗ ಆಂಧ್ರಪ್ರದೇಶದಿಂದಲೂ ಶಾಕ್ ಎದುರಾಗಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಮದ್ಯ ಮಾರಾಟ ಹಾಗೂ ಅಬಕಾರಿ ಇಲಾಖೆಯಲ್ಲಿ ಹಲವು ಪ್ರಮುಖ ಬದಲಾವಣೆಗಳು ಆಗಿವೆ. ಅದರಲ್ಲಿ ಮದ್ಯ ಬೆಲೆ ಏರಿಕೆ, ರೆಸ್ಟೋರೆಂಟ್ ಮತ್ತು ಪಬ್ ಹಾಗೂ ಬಾರ್ಗಳ ಲೈಸೆನ್ಸ್ ಶುಲ್ಕವನ್ನೂ ಹೆಚ್ಚಳ ಮಾಡಲಾಗಿದೆ. ಇದೆಲ್ಲವೂ ಪರೋಕ್ಷವಾಗಿ ಮದ್ಯ ಪ್ರಿಯರ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಎಲ್ಲಾ ಸೇವೆಗಳ ಬೆಲೆಯೂ ಏರಿಕೆಯಾಗಿದ್ದು ಕೆಲವು ಮದ್ಯ ಪ್ರಿಯರು ಮದ್ಯ ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಕರ್ನಾಟಕಕ್ಕೆ ಬರುತ್ತಿದ್ದ ಲಾಭವೂ ಈಗ ಕುಸಿತ ಕಂಡಿದೆ.
ಮದ್ಯ ಖರೀದಿಗೆ ಆಂಧ್ರ ಪ್ರದೇಶದಿಂದ ಕರ್ನಾಟಕದ ವಿವಿಧ ಗಡಿ ಪ್ರದೇಶಗಳಿಗೆ ಬರುತ್ತಿದ್ದ ಮದ್ಯ ಪ್ರಿಯರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಆಂಧ್ರದಲ್ಲೇ ಕಡಿಮೆ ಬೆಲೆಗೆ ಹಾಗೂ ಒಳ್ಳೆಯ ಬ್ರ್ಯಾಂಡ್ನ ಮದ್ಯ ಸಿಗುತ್ತಿರುವುದರಿಂದ ಜನ ಅಲ್ಲಿಂದ ಇಲ್ಲಿಗೆ ಬರುವುದು ಕಡಿಮೆಯಾಗಿದೆ. ಕೋಲಾರ ಸೇರಿದಂತೆ ವಿವಿಧ ಗಡಿಭಾಗದ ಜಿಲ್ಲೆಗಳಿಗೆ ಆಂಧ್ರ ಪ್ರದೇಶದಿಂದ ಮದ್ಯ ಪ್ರಿಯರು ಮದ್ಯ ಖರೀದಿ ಮಾಡುವುದಕ್ಕೆ ಬರುತ್ತಿದ್ದರು. ಆದರೆ ಈಗ ಇಳಿಕೆಯಾಗಿದ್ದು, ಇದರಿಂದ ಕೋಲಾರದಲ್ಲಿ ಮದ್ಯ ಮಾರಾಟ ಪ್ರಮಾಣವು ಶೇ 4.32 ರಷ್ಟು ಕುಸಿತವಾಗಿದೆ.