Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗೋಕಾಕದ ಗ್ರಾಮದೇವಿಗೆ ಜಾತ್ರೆಯ ಸಂಭ್ರಮ -ಮುಗಿಲೆತ್ತರಕ್ಕೆ ಚಿಮ್ಮಿದ ಭಕ್ತಿಯ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ…
ಕರ್ನಾಟಕದೇಶ

ಗೋಕಾಕದ ಗ್ರಾಮದೇವಿಗೆ ಜಾತ್ರೆಯ ಸಂಭ್ರಮ -ಮುಗಿಲೆತ್ತರಕ್ಕೆ ಚಿಮ್ಮಿದ ಭಕ್ತಿಯ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ…

Share
2 Min Read
SHARE

newsics.com

ಗೋಕಾಕನಲ್ಲಿ 10 ವರ್ಷಗಳ ಬಳಿಕ ನಡೆಯುತ್ತಿರುವ ಕರದಂಟು ನಾಡು ಗೋಕಾಕದ ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರೆ. ಕಳೆದ ಜೂ.30 ರಿಂದ ಆರಂಭವಾಗಿರುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿದೆ. ಎಲ್ಲಿ ನೋಡಿದ್ರು ಜನವೋ ಜನ. ಎತ್ತ ನೋಡಿದ್ರು ಅತ್ತ ಜನಸಾಗರ. ತೇರು ಬೀದಿಯಲ್ಲಿ ಸಾಗರೋಪಾದಿಯಲ್ಲಿ ಸೇರಿದ ಭಕ್ತ ಸಮೂಹ. ಗೋಕಾಕನಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಭಕ್ತ ಸಾಗರವೇ ಹರಿದು ಬಂದಿತು.

ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅದ್ದೂರಿ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಮಂಗಳವಾರ ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಈವರೆಗೆ 10ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿರುವುದು ದಾಖಲೆಯೇ ಸರಿ.

ವೈಭವೋಪಿತ ಬಣ್ಣಬಣ್ಣದ ವಿದ್ಯುತ್​ ದೀಪಗಳ ಅಲಂಕಾರದಿಂದ ಇಲ್ಲಿನ ಲಕ್ಷ್ಮೀ ದೇವಿ ಮಂದಿರ ಝಗಮಗಿಸುತ್ತಿದೆ. ತರಹೇವಾರಿ ಹೂಗಳಿಂದ ಹಾಗೂ ವಿದ್ಯುತ್‌ ದೀಪದಿಂದ ಸಿಂಗಾರಗೊಂಡಿರುವ ದೇವಿಯನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ. ಒಂಬತ್ತು ದಿನಗಳ ಕಾಲ ಗ್ರಾಮದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಮುಖ್ಯವಾಗಿ ದೇವಿಯನ್ನು ತೇರಿನಲ್ಲಿ ಕೂರಿಸಿ ಮುಖ್ಯ ಓಣಿಗಳಲ್ಲಿ ಒಟ್ಟಾಗಿ ಸಾಗಿದ್ದು ವಿಶೇಷವಾಗಿತ್ತು.

 

ವಿಶ್ವಕರ್ಮ ಶಿಲ್ಪಿಗಳಿಂದ 9 ತಿಂಗಳ ಕಾಲ ಈ ಎರಡು ರಥಗಳನ್ನು ಕೆತ್ತಲಾಗಿದೆ. ರಥ ತಲಾ 15 ಟನ್‌ ತೂಕವಿದ್ದು, ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಈ ರಥಗಳನ್ನು ನಿರ್ಮಾಣ ಮಾಡಲಾಗಿದೆ. ಕೋಟೇಶ್ವದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಬಾಶಿಯ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಪುತ್ರ ಲಕ್ಷ್ಮೀ ನಾರಾಯಾಣ ಆಚಾರ್ಯ ಅವರು ಈ ರಥಗಳನ್ನು ನಿರ್ಮಿಸಿದ್ದಾರೆ. ರಥ ನಿರ್ಮಾಣದಲ್ಲಿ ಒಟ್ಟು 46 ಜನ ಶಿಲ್ಪಿಗಳ ಕೆಲಸ ಮಾಡಿದ್ದು, ಈ ಜೋಡು ರಥೋತ್ಸವ ಅದ್ಧೂರಿಯಾಗಿ ಜರುಗಿತು. ರಥಗಳನ್ನು ಸಂಪೂರ್ಣ ಅಲಂಕರಿಸಲಾಗಿತ್ತು. ಬಂಗಾರ ಲೇಪಿನ ನೋಡುಗರನ್ನು ಆಕರ್ಷಿಸಿತು.

ಗೋಕಾಕ್​ ಜಾತ್ರೆ ಭಂಡಾರದ ಜಾತ್ರೆ ಅಂತಾನೆ ಪ್ರಖ್ಯಾತಿ ಪಡೆದಿದೆ. ಭಂಡಾರದಲ್ಲಿ ಲಕ್ಷಾಂತರ ಭಕ್ತರು‌ ಮಿಂದೆದ್ದರು. ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು, ಯುವಕ-ಯುವತಿಯರು ಪರಸ್ಪರ ಭಂಡಾರ ಹಚ್ಚಿ ಸಂಭ್ರಮಿಸಿದರು. ಇಡೀ ಗೋಕಾಕ್ ನಗರ ಹಳದಿಮಯ ಆಗಿತ್ತು.

 

 

TAGGED:#festival #village #goddess #Gokaka #devotees
Share This Article
Facebook Twitter Copy Link Print
Previous Article Rain Alert: ಬೆಳಗಾವಿಯಲ್ಲಿ ಭಾರೀ ಮಳೆ ಅಲರ್ಟ್
Next Article Color Astrology ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಮಂಗಳವಾರ ಈ ಬಣ್ಣದ ಬಟ್ಟೆ ಧರಿಸಿ

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?