newsics.com
ಬೆಂಗಳೂರು: ರಾಜ್ಯದಲ್ಲಿ ದಾಖಲಾಗ್ತಿರುವ ಸಾಲು ಸಾಲು ಹೃದಯಾಘಾತ ಪ್ರಕರಣಗಳು ಜನರಲ್ಲಿ ಆತಂಕ ಹೆಚ್ಚಿಸಿದೆ. ಹಾರ್ಟ್ ಅಟ್ಯಾಕ್ ಹೆಚ್ಚಿದ ಹಿನ್ನೆಲೆ ಹೃದಯಾಘಾತಕ್ಕೆ ಸಂಬಂಧಿಸಿದ ವರದಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಹೃದಯಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಆರೋಗ್ಯ ಸಚಿವರು, ಕೆಲವು ತಿಂಗಳುಗಳಿಂದ ಹಠಾತ್ ಸಾವು ವಿಚಾರದಲ್ಲಿ ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡಬೇಕು. ಸಂಶೋಧನೆ ಮಾಡಬೇಕು ಅಂತ ಮುಖ್ಯಮಂತ್ರಿ ಆದೇಶ ಮಾಡಿದ್ದರು. ಈ ಹಿನ್ನಲೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ಸಂಶೋಧನೆಯಾಗಿದೆ.
ಹೃದಯಾಘಾತ ಹೆಚ್ಚಗುವುದಕ್ಕೆ ಜನರ ಜೀವನ ಶೈಲಿ, ಬದುಕಿನ ಶೈಲಿ ಹೆಚ್ಚಾಗಿ ಕಾರಣವಾಗಿದೆ. ಲಸಿಕೆಯಿಂದ ನೇರವಾಗಿ ಹೃದಯಾಘಾತ ಕಾರಣವಲ್ಲ. mRNA ವ್ಯಾಕ್ಸಿನ್ ಯಾರು ತೆಗೆದು ಕೊಂಡಿಲ್ಲ. ಇದೊಂದು ವ್ಯಾಕ್ಸಿನ್ ದುಷ್ಪರಿಣಾಮ ಬೀರಿರುವ ಸಾಧ್ಯತೆಯಿದೆ. mRNA ವ್ಯಾಕ್ಸಿನ್ ತೆಗೆದು ಕೊಂಡವರಲ್ಲಿ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಕಾರ್ಡಿಯಕ್ ಸ್ಕ್ರೀನಿಂಗ್ ಮಾಡುತ್ತೇವೆ ಹಾಗೂ ಪಠ್ಯಪುಸ್ತಕದಲ್ಲಿ ಶಾಲಾ ಮಕ್ಕಳಿಗೆ ಹೃದಯಾಘಾತದ ಬಗ್ಗೆ ಹೆಚ್ಚು ತಿಳಿಯುವಂತೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ರು. ಶಿಕ್ಷಣ ಇಲಾಖೆಯಿಂದ ಮುಂದಿನ ವರ್ಷ ಯೋಜನೆ ರೂಪಿಸುತ್ತೇವೆ. ನೈತಿಕ ಶಿಕ್ಷಣದಲ್ಲಿ ಇದನ್ನು ಅಳವಡಿಸುತ್ತೇವೆ ಎಂದು ಮಧುಬಂಗಾರಪ್ಪ ಹೇಳಿದ್ರು. ಸಿಪಿಆರ್ ಕಲಿಸಲು ದೊಡ್ಡ ಪ್ರಮಾಣದಲ್ಲಿ ಯೋಜನೆ ರೂಪಿಸುತ್ತೇವೆ. ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ 86 ಆಸ್ಪತ್ರೆಯಲ್ಲಿ ಇದ್ದು, ಇದನ್ನು ಎಲ್ಲಾ ತಾಲೂಕುಗಳಿಗೂ ವಿಸ್ತರಣೆ ಮಾಡುವುದಾಗಿ ದಿನೇಶ್ ಗುಂಡೂರಾವ್ ಹೇಳಿದ್ರು.