newsics.com
ಕಾಂತಾರ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಇಂದು (ಜುಲೈ 7) ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.
‘ಕಾಂತಾರ: ಅಧ್ಯಾಯ 1’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಅವರು, ಸದ್ಯ ಕುಂದಾಪುರದಲ್ಲೇ ಬೀಡುಬಿಟ್ಟಿದ್ದಾರೆ. ಅಲ್ಲಿಯೇ ಅವರು ಹುಟ್ಟುಹಬ್ಬ ಆಚರಣೆಯನ್ನು ಮಾಡಿಕೊಂಡಿದ್ದಾರೆ. ಪ್ರೀತಿಯ ಮಡದಿ ಪ್ರಗತಿ ಶೆಟ್ಟಿ ಅವರು ಪತಿ ರಿಷಬ್‌ಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಂಡ ರಿಷಬ್ ಅವರಿಗೆ ದುರ್ಗಾಸ್ತಮಾನ ಮತ್ತು ಸೀತಾ ಪುಸ್ತಕಗಳನ್ನು ಗಿಫ್ಟ್ ನೀಡಲಾಯಿತು.
ನಟ ರಿಷಬ್ ಶೆಟ್ಟಿ ಬರ್ತ್ ಡೇಯಲ್ಲಿ ವಿಜಯ್ ಕಿರಗಂದೂರು, ಚೆಲುವೇಗೌಡ ಸೇರಿದಂತೆ ಟೀಮ್ ಸದಸ್ಯರು ಭಾಗಿಯಾಗಿದ್ದಾರೆ.
ನಟ ರಿಷಬ್ ಶೆಟ್ಟಿ ಹುಟ್ಟು ಹಬ್ಬದ ನಿಮಿತ್ತ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1 ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.