newsics.com
ಹೆಣ್ಣು ಎಂದರೆ ಮನೆಯ ಬೆಳಕು. ಹುಟ್ಟಿನಿಂದ ಸಾಯುವ ತನಕ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವವಳು. ಜಗದ ಸೃಷ್ಟಿಕರ್ತೆಯೇ ಅವಳಾಗಿರುವಾಗ ಆಕೆ ಇಲ್ಲದೆ ಜೀವಿಸುವುದು ಕಷ್ಟದಾಯಕ. ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಮಾದರಿಯಾಗಿದ್ದಾರೆ.
ಮಹಿಳೆಯರು ಜನ್ಮ ನೀಡುವ ವಿಶೇಷ ಶಕ್ತಿಯೊಂದಿಗೆ ಭೂಮಿಗೆ ಬಂದಿರುತ್ತಾರೆ. ಹೀಗಾಗಿ ಮಹಿಳೆಯರ ದೇಹವೂ ಕಾಲ ಕ್ರಮೇಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಅಭಿವೃದ್ಧಿಪಡಿಸುತ್ತದೆ. ಮಗುವಿಗೆ ಜನ್ಮ ನೀಡುವ ಹಾಗೂ ಸಂತಾನೋತ್ಪತಿಯ ಅಭಿವೃದ್ಧಿಯ ಕಾರಣದಿಂದಾಗಿ ಮಹಿಳೆಗೆ ಈ ಶಕ್ತಿ ಹೆಚ್ಚಿರುತ್ತದೆ.
ಮಹಿಳೆಯರ ನೆನಪಿನ ಶಕ್ತಿ ಪುರುಷರ ನೆನಪಿನ ಶಕ್ತಿಗಿಂತ ಹೆಚ್ಚು. ಅವರು ಒಮ್ಮೆ ನೋಡಿದ ಮುಖಗಳನ್ನು ಮತ್ತೆ ನೆನಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಹಲವು ಪರೀಕ್ಷೆಗಳಲ್ಲಿ ಪುರುಷರಿಗಿಂತ ಮಹಿಳೆಯರ ನೆನಪಿನ ಶಕ್ತಿ ಹೆಚ್ಚಿರುವುದು ಸಾಬೀತಾಗಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಆಘಾತಕಾರಿ ಘಟನೆಗಳು ಆಪಾಯಕಾರಿ ಗಾಯಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಏಕೆಂದರೆ ಮಹಿಳೆಯರ ಹಾರ್ಮೋನುಗಳು ಪುರುಷರ ಹಾರ್ಮೋನ್‌ಗಳಿಗಿಂತ ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಗರ್ಭಧಾರಣೆಯ ಸಮಯದಲ್ಲಿ ಅವರ ಗರ್ಭಕೋಶವೂ ಒಂದು ಸಣ್ಣ ಕಿತ್ತಳೆ ಹಣ್ಣಿನ ಗಾತ್ರದಿಂದ ಕಲ್ಲಂಗಡಿ ಹಣ್ಣಿನ ಗಾತ್ರದಷ್ಟು ದೊಡ್ಡದಾಗುತ್ತದೆ.
ಪುರುಷರ ಸ್ನಾಯುಗಳಿಗೆ ಹೋಲಿಸಿದರೆ ಮಹಿಳೆಯರ ದೇಹದ ಸ್ನಾಯುಗಳು ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಹೊಂದಿವೆ. ಏಕೆಂದರೆ ಮಹಿಳೆಯರ ಸ್ನಾಯುಗಳು ಹೆಚ್ಚು ಇಲಾಸ್ಟಿನ್ ಅನ್ನು ಹೊಂದಿವೆ. ಹಾಗೂ ಅವರ ಕೆಳಭಾಗದ ನರಹುರಿಯ ಮಗುವಿಗೆ ಜನ್ಮ ನೀಡುವುದಕ್ಕೆ ದೇಹವನ್ನು ಸಿದ್ಧಪಡಿಸುತ್ತದೆ. ಹೀಗಾಗಿ ಮಹಿಳೆಯ ದೇಹಕ್ಕೆ ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಸ್ನಾಯು ಸಹಿಷ್ಣುತೆಯನ್ನು (Muscle endurance) ಹೊಂದಿದ್ದಾರೆ. ಶಕ್ತಿಯ ವಿಷಯದಲ್ಲಿ ಪುರುಷರು ಸಾಮಾನ್ಯವಾಗಿ ಮೇಲುಗೈ ಸಾಧಿಸುತ್ತಾರೆ. ಆದರೆ ಮಹಿಳೆಯರು ಪುರುಷರಿಗಿಂತ ಉತ್ತಮ ಸ್ನಾಯು ಸಹಿಷ್ಣುತೆಯನ್ನು ಹೊಂದಿದ್ದಾರೆಂದರೆಂಬುದು ಹಲವರಿಗೆ ಆಶ್ಚರ್ಯವಾಗಬಹುದು.
ತ್ರಾಣ ಸಂಬಂಧಿತ ವ್ಯಾಯಾಮಗಳಲ್ಲಿ, ಮಹಿಳೆಯರು ಪುರುಷರಿಗಿಂತ ಸುಮಾರು 75% ಹೆಚ್ಚು ಕಾಲ ವ್ಯಾಯಾಮ ಮಾಡಲು ಸಾಧ್ಯವಾಗಿದೆ ಎಂದು ಸಂಶೋಧನೆ ತೋರಿಸಿದೆ. ಮಹಿಳೆಯರಲ್ಲಿ ಈಸ್ಟ್ರೊಜೆನ್ ಇರುವಿಕೆಯು ಅವರ ಸ್ನಾಯುಗಳನ್ನು ಆಯಾಸಕ್ಕೆ ಹೆಚ್ಚು ನಿರೋಧಕವಾಗಿಸುತ್ತದೆ ಮತ್ತು ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಸ್ನಾಯುಗಳಲ್ಲಿ ಹೆಚ್ಚು ಪರಿಣಾಮಕಾರಿ ಚಯಾಪಚಯ ಕ್ರಿಯೆಯನ್ನು ಹೊಂದಿದ್ದಾರೆ ಎನ್ನುತ್ತಾರೆ ತಜ್ಞರು.
TIPS TO REMOVE SMELLS ಮಳೆಗಾಲದಲ್ಲಿ ಬಟ್ಟೆ ವಾಸನೆ ಬರ್ತಿದ್ರೆ ಈ ರೀತಿ ಮಾಡಿ…