newsics.com
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಮಿಂಚಿದ್ರು. ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಂಯುಕ್ತಾ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಈ ಒಂದು ಫೊಟೋ ಸಖತ್ ಸೆನ್ಷೇಷನ್ ಆಗಿದೆ.
ಗೆಳತಿಯ ತುಟಿಗೆ ತುಟಿ ಒತ್ತಿರುವಂತಹ ಫೋಟೊವನ್ನು ಸಂಯುಕ್ತಾ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಆತ್ಮೀಯ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಬಗ್ಗೆ ಎಲ್ಲಾ ತಿಳಿದಿದ್ದರೂ ನನ್ನನ್ನು ಪ್ರೀತಿಸಿದವಳು. ನೀನೇ ನನಗೆ ಸಂಪೂರ್ಣ ಪ್ರಪಂಚ. ಶಾಲೆ ಮತ್ತು ಕಾಲೇಜಿನಲ್ಲಿ ನೃತ್ಯ ಮಾಡುವುದರಿಂದ ಹಿಡಿದು ನಿನ್ನನ್ನು ವಧುವಾಗಿ ನೋಡುವರೆಗೆ, ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನೀನು ನನ್ನ ಜೊತೆಗಿದ್ದೀಯ. ನಿನ್ನಂತ ಸ್ನೇಹಿತೆಯ್ನು ಪಡೆಯಲು ನಾನು ಅದೃಷ್ಟಶಾಲಿ. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ” ಎಂದು ಸಂಯುಕ್ತಾ ಪೋಸ್ಟ್ ಮಾಡಿದ್ದಾರೆ.
ಕೆಲವರು ಈ ಫೋಟೋ ಕಂಡು ಪಾಸಿಟಿವ್ ಮಾತನಾಡಿದ್ದಾರೆ. ಸ್ನೇಹಿತೆಯರ ಬಾಂಡಿಂಗ್ ಹೀಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಎಷ್ಟೇ ಆತ್ಮೀಯತೆ ಇದ್ದರೂ ಈ ರೀತಿ ಕೆಟ್ಟದ್ದಾಗಿ ಫೊಟೋ ಶೇರ್ ಮಾಡೋದಲ್ಲ ಎಂದು ಕಮೆಂಟ್ ಮಾಡಿದ್ದಾರೆ.
https://www.instagram.com/p/DLpD8cGSNqo/?igsh=dDc4a3llanhibnVo