newsics.com
ಥೈಲ್ಯಾಂಡ್ನ ಮಾದಕ ವ್ಯಸನದ ಅಡ್ಡದಿಂದ ಎಂಟು ವರ್ಷದ ಬಾಲಕನ್ನು ರಕ್ಷಣೆ ಮಾಡಲಾಗಿತ್ತು. ಈ ಹುಡುಗ ನಾಯಿಗಳ ಜತೆಗೆ ಬೆಳೆದು, ಈಗ ಅದರಂತೆ ಬೊಗಳುತ್ತಿದ್ದಾನೆ.
ಹೌದು ಜೂನ್ 30ರಂದು ಥೈಲ್ಯಾಂಡ್ನ ಉತ್ತರಾದಿತ್ ಪ್ರಾಂತ್ಯದ ಲ್ಯಾಪ್ಲೇ ಜಿಲ್ಲೆಯಲ್ಲಿ ಮಾದಕ ವ್ಯಸನಗಳ ಅಡ್ಡದಿಂದ ಈ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು. ಶಾಲೆಯ ಪ್ರಾಂಶುಪಾಲರು ಮತ್ತು ಸ್ಥಳೀಯ ಕಾರ್ಯಕರ್ತರು ನೀಡಿದ ದೂರಿನ ನಂತರ ಪೊಲೀಸರು ಆ ಮಾದಕ ವ್ಯಸನ ಅಡ್ಡದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿಂದ ಈ ಹುಡುಗನನ್ನು ರಕ್ಷಣೆ ಮಾಡಿದ್ದಾರೆ.
ಈ ಬಾಲಕ ಎರಡು ವರ್ಷಗಳಿಂದ ಶಾಲೆಗೆ ಹೋಗಿರಲಿಲ್ಲ. ನಾಯಿಗಳ ಜತೆಗೆ ಆಟವಾಡಿಕೊಂಡ, ಅವುಗಳ ಜತೆಗೆ ಬೆಳೆದಿದ್ದಾನೆ. ಈಗ ಆತನಿಗೆ ಪದಗಳನ್ನು ಬಳಸಲು ಅಥವಾ ಸಾಮಾನ್ಯ ಮನುಷ್ಯರಂತೆ ಮಾತನಾಡಲು ಆಗುತ್ತಿಲ್ಲ. ಬದಲಿಗೆ ನಾಯಿಗಳಂತೆ ಬೊಗಳುತ್ತಿದ್ದಾನೆ. ಆತನ ಸಂವಹನವು ನಾಯಿಗಳಂತೆ ಆಗಿದೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ.
ಆ ಹುಡುಗನ ತಾಯಿ ಆರು ನಾಯಿಗಳೊಂದಿಗೆ ಅವನನ್ನು ಒಂಟಿಯಾಗಿ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಳು ಎಂದು ಹೇಳಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಹುಡುಗನ ತಾಯಿ ಹಾಗೂ ಸಹೋದರ ಆತನನ್ನು ಮಾದಕ ವಸ್ತುಗಳ ಅಡ್ಡಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ. ಆತನ ತಾಯಿ ಅವನ ಶಿಕ್ಷಣಕ್ಕಾಗಿ ಸರ್ಕಾರದಿಂದ ಹಣ ಕೂಡ ಪಡೆದಿದ್ದಾರೆ. ಆದರೆ ಅದನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
. ಯಾರೊಂದಿಗೂ ಬೆರೆಯುವ ಅವಕಾಶ ಈ ಹುಡಗನಿಗೆ ಸಿಕ್ಕಿಲ್ಲ. ಹಾಗಾಗಿ ಆತನಿಗೆ ಯಾರ ಜತೆಗೂ ಮಾತನಾಡಲು ಆಗುತ್ತಿರಲಿಲ್ಲ. ಆದರೆ ಆತ ಬಿದಿ ನಾಯಿಗಳ ಜತೆಗೆ ಗೆಳೆತನ ಬೆಳಸಿಕೊಂಡ, ಅವುಗಳ ನಡವಳಿಕೆಯನ್ನು ಅನುಕರಿಸಲು ಪ್ರಾರಂಭಿಸಿದ, ಆ ಹುಡುಗನಿಗೆ ಆಟವಾಡಲು ನಾಯಿಗಳನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಎಂದು ಸ್ಥಳೀಯ ಶಿಕ್ಷಕರು ಹೇಳಿದ್ದಾರೆ.