newsics.com
ದಾವಣಗೆರೆ: ಆನ್ಲೈನ್ ಬೆಟ್ಟಿಂಗ್ನಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ. ಈತ ತಾನು ಜೀವ ಕಳೆದುಕೊಳ್ಳುವುದಕ್ಕೂ ಮೊದಲು ಸುದೀರ್ಘ 6 ಪುಟ ನೋಟ್ ಬರೆದಿಟ್ಟಿದ್ದಾರೆ.ಈ ಬಗ್ಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು, ಎಸ್ ಪಿಗಳಿಗೂ ಪತ್ರ ಬರೆದು ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದ. ಅಲ್ಲದೇ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಹಿನ್ನೆಲೆಯಲ್ಲಿ ಯುವಕ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
CROWN-246 ಎಂಬ ಆನ್ ಲೈನ್ ಗೇಮ್ ಆಡಿ ಯುವಕ ll 18 ಲಕ್ಷ ಹಣ ಕಳೆದುಕೊಂಡಿದ್ದನು. ಇದರಲ್ಲಿ 19 ಕೋಟಿಗೂ ಅಧಿಕ ದುಡ್ಡು ಗೆದ್ದಿದ್ದರೂ ಕೊಟ್ಟಿಲ್ಲ.