newsics.com
ಬೆಂಗಳೂರು: ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿ ಓಡಾಡುತ್ತಿದ್ದ ಐಷಾರಾಮಿ ಫೆರಾರಿ ಕಾರನ್ನು ಆರ್ಟಿಓ (RTO) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿರುವ ಐಷಾರಾಮಿ ಫೆರಾರಿ ಕಾರು ಬೆಂಗಳೂರಿನಲ್ಲಿ ಓಡಾಡಿಕೊಂಡಿತ್ತು. ಜಯನಗರದಲ್ಲಿರುವ ಕಾರಿನ ಮನೆಯ ಮಾಲೀಕರಿಗೆ ಇದೀಗ ಆರ್ ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಕಾರಿನ ಮಾಲೀಕ ತೆರಿಗೆ ಪಾವತಿಗೆ ಸಮಯಾವಕಾಶ ಕೋರಿದ್ದಾನೆ. ಈ ಹಿನ್ನೆಲೆಯಲ್ಲಿ ಆರ್ಟಿಓ ಅಧಿಕಾರಿಗಳು ಜುಲೈ 03ರ ಸಂಜೆಯವರೆಗೆ 1.58 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಲು ಗಡುವು ನೀಡಿದ್ದಾರೆ. ಒಂದು ವೇಳೆ ಈ ಗಡುವಿನೊಳಗೆ ತೆರಿಗೆ ಪಾವತಿಯಾಗದಿದ್ದರೆ, ಕಾರನ್ನು ಸೀಜ್ ಮಾಡಿ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರ್ಟಿಓ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ
ಸುಮಾರು ಏಳೂವರೆ ಕೋಟಿ ಮೌಲ್ಯದ ಫೆರಾರಿ ಕಾರು ಬೆಂಗಳೂರಿನ ಲಾಲ್ ಬಾಗ್ ಬಳಿ ತೆರಳುತ್ತಿದ್ದ ಆರ್ ಟಿ ಓ ಅಧಿಕಾರಿಗಳು ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಲೀಕ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿ ಓಡಾಡುತ್ತಿರುವುದು ಖಚಿತವಾಗಿದೆ. ಕಾರನ್ನು ವಶಕ್ಕೆ ಪಡೆದಿರುವ ಆರ್ ಟಿಓ ಅಧಿಕಾರಿಗಳು ಇಂದು ಸಂಜೆಯೊಳಗೆ 1.58 ತೆರಿಗೆ ಪಾವತಿಸಿ ಕಾರು ಪಡೆದುಕೊಳ್ಳುವಂತೆ ಡೆಡ್ ಲೈನ್ ನೀಡಿದ್ದಾರೆ.