newsics.com
ಪಣಜಿ : ಗೋವಾದಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಪುಣೆಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ SG-1080 ನಲ್ಲಿ ವಿಮಾನದ ಕಿಟಕಿಯ ಚೌಕಟ್ಟು ಹೊರಬಂದಿದ್ದು, ಅದನ್ನು ನೋಡಿ ಪ್ರಯಾಣಿಕರು ಭಯಭೀತರಾಗಿದ್ದಾರೆ.ವಿಮಾನದ ಕಿಟಕಿಯ ಹೊರ ಪದರಗಳು ಹಾಗೆಯೇ ಉಳಿದಿರುವುದರಿಂದ ಮತ್ತು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿಲ್ಲ.
ಕ್ಯಾಬಿನ್‌ನಲ್ಲಿ ಯಾವುದೇ ಒತ್ತಡ ಕಡಿಮೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಹೇಳಿದೆ.
‘ಕಿಟಕಿ ಕಳಚಿರುವುದರಿಂದ ಪ್ರಯಾಣಿಕರು ಆತಂಕಗೊಂಡಿದ್ದರು. ವಿಮಾನ ಸಿಬ್ಬಂದಿ ನಮ್ಮನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ ಅವರು ಇನ್ನೇನು ಮಾಡುತ್ತಾರೆ? ಸಡಿಲಗೊಂಡಿದ್ದ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ಬೇರೆ ಸೀಟ್ಗೆ ಸ್ಥಳಾಂತರಿಸಿದರು. ಕಿಟಕಿಯನ್ನು ಸ್ವಲ್ಪಮಟ್ಟಿಗೆ ಮುಚ್ಚುವಲ್ಲಿ ಯಶಸ್ವಿಯಾದರು’ ಎಂದು ಪ್ರಯಾಣಿಕರು ಹೇಳಿದ್ದಾರೆ.
‘ಹಿಂದಿನ ದಿನವೂ ತಾಂತ್ರಿಕ ಸಮಸ್ಯೆಗಳಿಂದ ವಿಮಾನ ವಿಳಂಬವಾಗಿದೆ ಎಂದು ನಮಗೆ ವಿಮಾನ ನಿಲ್ದಾಣದಲ್ಲಿ ತಿಳಿಯಿತು. ಜುಲೈ 1 ರಂದು ಸಂಜೆ 5.20 ಕ್ಕೆ ವಿಮಾನವು ನಿಗದಿಯಾಗಿತ್ತು, ಸಂಜೆ 6.55ಕ್ಕೆ ಒಂದೂವರೆ ಗಂಟೆ ತಡವಾಗಿ ಹೊರಟಿತು. ಆದರೂ ವಿಮಾನಯಾನ ಸಂಸ್ಥೆಯು ಯಾವುದೇ ಸಂದೇಶ ನೀಡಿರಲಿಲ್ಲ. ನವೀಕರಣ ಮಾಡುತ್ತಿದ್ದೇವೆ ಎಂದು ತಿಳಿಸಿರಲಿಲ್ಲ’ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
‘ಸ್ಪೈಸ್‌ಜೆಟ್‌ನ Q400 ವಿಮಾನವೊಂದರಲ್ಲಿನ ಕಿಟಕಿ ಚೌಕಟ್ಟು ಹಾರಾಟದ ಸಮಯದಲ್ಲಿ ಸಡಿಲಗೊಂಡಿತ್ತು. ಇದು ವಿಮಾನದ ಒಳಭಾಗದಲ್ಲಿನ ಒಂದು ಚಿಕ್ಕ ಚೌಕಟ್ಟಾಗಿದ್ದು, ನೆರಳಿನ ಉದ್ದೇಶಕ್ಕಾಗಿ ಕಿಟಕಿಗೆ ಅಳವಡಿಸಲಾಗಿತ್ತು. ಅದು ಕಳಚಿದ್ದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕ್ಯಾಬಿನ್ ಒತ್ತಡವು ಹಾರಾಟದುದ್ದಕ್ಕೂ ಸಾಮಾನ್ಯವಾಗಿತ್ತು ಮತ್ತು ಪ್ರಯಾಣಿಕರ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ’ ಎಂದು ಸ್ಪೈಸ್‌ಜೆಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.