newsics.com
ಬೆಂಗಳೂರು: ಪತಿ ಮತ್ತು ಆತನ ಕುಟುಂಬ ಸದಸ್ಯರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದರ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೇಗೂರು ನಿವಾಸಿ 21 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಪತಿ ಯೂನಿಷ್ ಪಾಷಾ, ಮಾವ ಚಾಂದ್ ಪಾಷ ಮತ್ತು ಅತ್ತೆ ಷಹೀನ್ ತಾಜ್ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಸದ್ಯ ಬನಶಂಕರಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ರಾಜಕಾರಣಿಗಳ ಜೊತೆ ಮಲಗೆಂದು ಒತ್ತಾಯ
ಸಂತ್ರಸ್ತೆಯು 25-6-2021 ರಂದು ಆರೋಪಿ ಯೂನಸ್ ಪಾಷಾನನ್ನು ವಿವಾಹವಾಗಿದ್ದರು. ಇದಾದ ಸುಮಾರು 4 ತಿಂಗಳ ನಂತರ ಆರೋಪಿಗಳಾದ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ, ತಾಯಿ ಪಹೀನ್ ತಾಜ್ ಸೇರಿಕೊಂಡು ಸಂತ್ರಸ್ತೆಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆಯು ಗರ್ಭವತಿಯಾಗಿದ್ದು, ಯೂನಸ್ ಪಾಷಾ ಆಕೆಯ ಹೊಟ್ಟೆಯ ಮೇಲೆ ಒದ್ದು ಹಲ್ಲೆ ಮಾಡಿದ್ದ. 17-12-2021 ರಂದು ಸಂತ್ರಸ್ತೆಯನ್ನು ಹೆದರಿಸಿ ಮತ್ತು ಒತ್ತಾಯಪಡಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಹಣಕ್ಕಾಗಿ ನನ್ನನ್ನು ಓರ್ವ ರಾಜಕಾರಣಿಗೆ ಮಾರಾಟ ಮಾಡಲು ಯೋಜಿಸಿದ್ದಾನೆ ಎಂದು ನನಗೆ ತಿಳಿದುಬಂದಿದೆ. ಇದರ ನಂತರ ಆತನ ಮನೆಯಿಂದ ತಪ್ಪಿಸಿಕೊಂಡು ಕಳೆದ 2 ತಿಂಗಳಿನಿಂದ ನನ್ನ ತಾಯಿಯೊಂದಿಗೆ ವಾಸವಿದ್ದೇನೆ.
ಜೂನ್ 4ರಂದು, ನನ್ನ ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ತೆಗೆದುಕೊಳ್ಳಲು ನಾನು ಪತಿಯ ಮನೆಗೆ ಹೋಗಿದ್ದಾಗ ಆತ, ನನಗೆ ಹಾಗೂ ನನ್ನ ತಾಯಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ. ಆ ದಿನ ಎಲ್ಲರೆದುರು 6 ಬಾರಿ “ತಲಾಖ್” ಹೇಳಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಪತ್ನಿ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ ಆರೋಪಿ
ನಡವಳಿಕೆಗಳನ್ನು ಪ್ರಶ್ನಿಸಿದರೆ ಯೂನಸ್ ಪಾಷಾ ಆಯುಧಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ. ಪತ್ನಿಯ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ತಂದೆ ಮತ್ತು ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಬರುತ್ತಿದ್ದ. 2023 ರಲ್ಲಿ ಸಂತ್ರಸ್ತೆ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಎಂದು ಎಫ್‌ಐಆರ್ನಲ್ಲಿ ತಿಳಿಸಲಾಗಿದೆ.
Heavy rains in various parts ಮುಂಗಾರು ಮತ್ತೆ ಚುರುಕು: ರಾಜ್ಯದ ವಿವಿಧೆಡೆ ಭಾರೀ ಮಳೆ