newsics.com
ದಾವಣಗೆರೆ : ಮನೆಯಲ್ಲಿದ್ದ ಯುಪಿಎಸ್ ಸ್ಪೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಪೋಟಗೊಂಡ ಪರಿಣಾಮ ಅಗ್ನಿಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ವಿಮಾ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ.
ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಹಿರೇಮಠ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮಧ್ಯರಾತ್ರಿ 2.00 ಗಂಟೆಯ ವೇಳೆ ಎಲ್ಲರೂ ಗಾಢನಿದ್ರೆಯಲ್ಲಿದ್ದಾಗ, ಶಾರ್ಟ್ ಸರ್ಕೀಟ್ ನಿಂದ ಯುಪಿಎಸ್ ಸ್ಪೋಟಗೊಂಡಿತ್ತು. ದಟ್ಟವಾದ ಹೊಗೆಯಿಂದ ಇಡೀ ಕೋಣೆ ವ್ಯಾಪಿಸಿತ್ತು. ಮೃತರಿಬ್ಬರೂ ಯುಪಿಎಸ್ ಇದ್ದ ಕೋಣೆಯಲ್ಲಿಯೇ ಮಲಗಿದ್ದ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆಮಾಡಿತಾಯಿದಾರೂ, ಆಸ್ಪತ್ರೆಗೆ ಧಾವಿಸುವಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಾವು ಯಾವಾಗ ಬರುತ್ತೆ.? ಈ ಸಣ್ಣ ‘ಟೆಸ್ಟ್’ನಿಂದ ಮರಣ ರಹಸ್ಯ ಬಯಲು!