newsics.com
ಚಾಮರಾಜನಗರ: ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳ ಸಾವಿಗೆ ತಮಿಳುನಾಡು ಜಾನುವಾರು ಮಾಲೀಕರ ‘ಸಗಣಿ ಮಾಫಿಯಾ’ ಪರೋಕ್ಷ ಕಾರಣವಾಯಿತೇ’ ಎಂಬ ಅನುಮಾನ ದಟ್ಟವಾಗಿದೆ.
ಹನೂರು ತಾಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ ಕೊಪ್ಪ ಗ್ರಾಮದ ಮಾಹಾರಾಜು, ನಾಗರಾಜು ಹಾಗೂ ಕುನ್ನಪ್ಪ ಬಂತ ಆರೋಪಿಗಳು. ಹುಲಿಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿ ಅವುಗಳು ವಿಷಪ್ರಾಶನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಮೂವರು ಆರೋಪಿಗಳನ್ನು ಬಂಸಿ, ನ್ಯಾಯಾಂಗ ಬಂಧನ ಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.
ಇನ್ನು ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವವರಿಗೆ ದಶಕಗಳಿಂದಲೂ ಜಾನುವಾರು ಸಾಕಣೆಯೇ ಪ್ರಮುಖ ವೃತ್ತಿ. ಸ್ವಂತ ಜಾನುವಾರು ಹೊಂದಿರುವವರೂ ವಿರಳ. ಬಹುತೇಕರು ತಮಿಳುನಾಡಿನ ಜಾನುವಾರುಗಳನ್ನು ಮೇಯಿಸುತ್ತಿದ್ದಾರೆ.
‘ತಮಿಳುನಾಡಿನ ಸಾವಿರಾರು ಹಸುಗಳನ್ನು ನಿಯಮಬಾಹಿರವಾಗಿ ಕಾಡಿನೊಳಗೆ ಮೇಯಿಸಲು ನುಗ್ಗಿಸುತ್ತಿರುವುದಿಂದ ಮಾನವ–ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಜಾನುವಾರುಗಳ ಮೇಲೆ ದಾಳಿ ಮಾಡುವ ಕಾಡು ಪ್ರಾಣಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಳೇಬರಕ್ಕೆ ವಿಷ ಹಾಕಲಾಗುತ್ತಿದೆ’ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸ್ಥಳೀಯರೇ ಹಸುಗಳನ್ನು ಮೇಯಿಸುವುದರಿಂದ ಜಾನುವಾರುಗಳ ನಿಜವಾದ ‘ಮಾಲೀಕರು’ ಯಾರೆಂದು ಗುರುತಿಸುವುದು ಸವಾಲು. ಅರಣ್ಯ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಹಿಂದೆ ಸಮೀಕ್ಷೆ ಮಾಡಿದಾಗ 6,500ಕ್ಕೂ ಹೆಚ್ಚು ಜಾನುವಾರುಗಳಿದ್ದವು. 5ಸಾವಿರಕ್ಕೂ ಹೆಚ್ಚು ಹಸುಗಳ ಮಾಲೀಕರು ತಮಿಳುನಾಡಿನವರು ಎಂದು ಖಚಿತವಾದರೂ, ಕ್ರಮ ಕೈಗೊಳ್ಳಲು ಸ್ಥಳೀಯರು, ಜನಪ್ರತಿನಿಧಿಗಳು ವಿರೋಧಿಸಿದರು’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಕಾಡಂಚಿನ ಗ್ರಾಮಸ್ಥರಿಗೆ ಜಾನುವಾರು ಸಾಕಾಣಿಕೆ ಹೊಣೆಗಾರಿಕೆ ವಹಿಸುವ ತಮಿಳುನಾಡಿನವರು, ಮಾಸಿಕ ಹಣ ನೀಡಿ, ಲೋಡ್‌ಗಟ್ಟಲೆ ಸಗಣಿ ಗೊಬ್ಬರವನ್ನು ಮಾರಿ ಲಾಭ ಗಳಿಸುತ್ತಾರೆ. ಸ್ಥಳೀಯರಿಗೆ ಹಣದ ಜೊತೆಗೆ ಹಾಲಷ್ಟೇ ಸಿಗುತ್ತದೆ.
ಪಾಲಾರ್‌ನ ನದಿ ಮೂಲಕ ಹಸುಗಳು ಈ ‘ಜಾಗಕ್ಕೆ ಬರುತ್ತಿವೆ ಎಂಬ ಮಾಹಿತಿ ಸಹ ಅರಣ್ಯ ಇಲಾಖೆಗೂ ಇತ್ತು. ಅಲ್ಲದೇ ಈ ಪ್ರದೇಶಗಳಲ್ಲಿ ಹೆಚ್ಚು ತಮಿಳುನಾಡು ನೋಂದಣಿಯ ವಾಹನಗಳು ಓಡಾಡುತ್ತಿವೆ. ಹಸುಗಳನ್ನು ಕಾಡಿಗೆ ಬಿಟ್ಟ ನಂತರ ಸಗಣಿಯನ್ನು ಸಹ ಅರಣ್ಯದಲ್ಲಿಯೇ ಸಂಗ್ರಹಿಸಿ, ವಾಹನಗಳಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ.
ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ ಹೊಂದಿರುವ ಈ ಸ್ವದೇಶಿ ಹಸುಗಳು ಕಾಡಿನಲ್ಲಿ ಮೇಯುತ್ತಿದ್ದಾಗ ಹುಲಿ ಹಾಗೂ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುವುದು ಸಹಜ.
ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಹಸುಗಳ ಸಂಖ್ಯೆ ಕಡಿಮೆಯಾದರೆ ಹಸು ಗುತ್ತಿಗೆ ಪಡೆದುಕೊಂಡವರು ಹಣ ಕೊಡಬೇಕಾಗುತ್ತದೆ. ಅಲ್ಲದೇ ಸಗಣಿಯೂ ಕಡಿಮೆಯಾಗುತ್ತದೆ ಎಂಬ ದುರಾಲೋಚನೆಯಿಂದ ಇಂಥ ಕೃತ್ಯಕ್ಕೆ ಇಲ್ಲಿನ ನಿವಾಸಿಗಳು ಕೈಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಹಿಂದಿ ಹೇರಿಕೆ ಹಿನ್ನೆಲೆ ತ್ರಿಭಾಷಾ ನೀತಿಯನ್ನೇ ರದ್ದುಪಡಿಸಿದ ಮಹಾರಾಷ್ಟ್ರ ಸರ್ಕಾರ