Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Airport news ಏರ್‌ಪೋರ್ಟ್‌ನಲ್ಲಿ ಒಂದೂವರೆ ವರ್ಷದ ಮಗು ಎತ್ತಿ ನೆಲಕ್ಕೆ ಬಡಿದ ಅಪರಿಚಿತ, ಮಗು ಸ್ಥಿತಿ ಗಂಭೀರ, ವಿಡಿಯೊ ನೋಡಿ
ಪ್ರಮುಖವಿದೇಶವೈರಲ್

Airport news ಏರ್‌ಪೋರ್ಟ್‌ನಲ್ಲಿ ಒಂದೂವರೆ ವರ್ಷದ ಮಗು ಎತ್ತಿ ನೆಲಕ್ಕೆ ಬಡಿದ ಅಪರಿಚಿತ, ಮಗು ಸ್ಥಿತಿ ಗಂಭೀರ, ವಿಡಿಯೊ ನೋಡಿ

Share
2 Min Read
SHARE

newsics.com

ರಷ್ಯಾದ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗನೊಬ್ಬ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡು ನೆಲಕ್ಕೆ ಬಿಸಾಕಿದ ಆಘಾತಕಾರಿ ಘಟನೆಯೊಂದು ನಡೆದಿದೆ.

ಮಗು ಮತ್ತು ಅವನ ತಾಯಿ ರಷ್ಯಾಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದ್ದು, ಈ ಹಲ್ಲೆಯಲ್ಲಿ ಮಗುವಿನ ತಲೆಬುರುಡೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿವೆ.

ಬೆಚ್ಚಿಬೀಳಿಸುವ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.
ಮಾಸ್ಕೋ ವಿಮಾನ ನಿಲ್ದಾಣದ ಎಂಟ್ರೆನ್ಸ್ ಹಾಲ್‌ನಲ್ಲಿ ಈ ಭಯಾನಕ ಘಟನೆ ನಡೆದಿದೆ.

ವೈರಲ್ ಆದ ವಿಡಿಯೊದಲ್ಲಿ, ಮಗುವಿನ ಮೇಲೆ ದಾಳಿ ಮಾಡುವ ಮೊದಲು ಈತ ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೆಯೇ ಎಂದು ಸುತ್ತಲೂ ನೋಡುತ್ತಿರುವುದು ಸೆರೆಯಾಗಿದೆ. ಯಾರೂ ಇಲ್ಲದಿರುವುದನ್ನು ಗಮನಿಸಿ ಮಗುವನ್ನು ಬಲವಂತವಾಗಿ ಎತ್ತಿ ನೆಲಕ್ಕೆ ಹೊಡೆದಿದ್ದಾನೆ. ನಂತರ ಮಗು ಬಿದ್ದಿದೆ ಎಂದು ಎಲ್ಲರಿಗೂ ಹೇಳುವುದು ವಿಡಿಯೊದಲ್ಲಿ ಸೆರೆಯಾಗಿದೆ. ಮಗುವಿನ ಹಲ್ಲೆ ನಡೆದಾಗ ಮಗುವಿನ ತಾಯಿ ತಳ್ಳುವ ಕುರ್ಚಿಯನ್ನು ತರಲು ಹೋಗಿದ್ದಳಂತೆ.

ಅಮೆರಿಕ- ಇಸ್ರೇಲ್ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್‌ನಿಂದ ಪಲಾಯನ ಮಾಡಿ ಅಫ್ಘಾನಿಸ್ತಾನದ ಮೂಲಕ ಪ್ರಯಾಣಿಸಿ ನಂತರ ರಷ್ಯಾಕ್ಕೆ ಬಂದಿರುವುದಾಗಿ ಮಗುವಿನ ಕುಟುಂಬವು ಹೇಳಿದೆ.

ಮಗುವಿನ ಮೇಲೆ ಈ ದಾಳಿ ಯಾವ ಕಾರಣಕ್ಕಾಗಿ ನಡೆದಿರಬಹುದು ಎಂದು ತನಿಖಾಧಿಕಾರಿಗಳು ತನಿಖೆ ನಡೆಸಿದ್ದಾರೆ.

ಮಾಸ್ಕೋ ಪ್ರದೇಶದ ಮಕ್ಕಳ ಹಕ್ಕುಗಳ ಆಯುಕ್ತೆ ಕ್ಸೆನಿಯಾ ಮಿಶೋನೋವಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಮಾದಕ ವಸ್ತುವಿನ ವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ಹಾಲ್‌ನಲ್ಲಿ ಮಗುವನ್ನು ಹಿಡಿದು ನೆಲದ ಮೇಲೆ ಎಸೆದಿದ್ದಾನೆ… ಇದೆಲ್ಲವನ್ನೂ ಸಹಿಸಿಕೊಳ್ಳುವುದು ತುಂಬಾ ಕಷ್ಟಕರ. ಬಂಧಿತ ವ್ಯಕ್ತಿಗೆ ಕಾನೂನಿನಿಂದ ಕಠಿಣ ಶಿಕ್ಷೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಮಗುವಿನ ಪೋಷಕರಿಗೆ ನ್ಯಾಯ ಸಿಗಲಿ” ಎಂದು ಮಿಶೋನೋವಾ ತಿಳಿಸಿದ್ದಾರೆ.ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬೆಲಾರಸ್‌ನ 31 ವರ್ಷದ ವ್ಲಾಡಿಮಿರ್ ವಿಟ್ಕೋವ್ ಎಂದು ಗುರುತಿಸಲಾಗಿದೆ.

ಮಗುವಿನ ಮೇಲೆ ದಾಳಿ ಮಾಡುವಾಗ ಆತ ಮಾದಕ ದ್ರವ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆ ಯತ್ನದ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ.

https://twitter.com/i/status/1937456362298237005

ಮನಾಲಿಯಲ್ಲಿ ಮೇಘಸ್ಫೋಟ : ಜನರಲ್ಲಿ ಆತಂಕ

TAGGED:A stranger picked up a one-and-a-half-year-old child and threw him to the ground at the airport
Share This Article
Facebook Twitter Copy Link Print
Previous Article M.S. Dhoni ಆಪ್ತ ಗೆಳೆಯನ ಬರ್ತ್​ಡೇ ಸೆಲಬ್ರೇಶನ್​ಗೆ ಧೋನಿ ಸರ್​​​ಪ್ರೈಸ್​ ಎಂಟ್ರಿ – ವೈರಲ್ ವಿಡಿಯೋ ನೋಡಿ
Next Article Rain alert ರಾಜ್ಯದಲ್ಲಿ ಭಾರೀ ಮಳೆ; ಇಂದು ಸಹ ವಿವಿಧೆಡೆ ಶಾಲೆಗಳಿಗೆ ರಜೆ!

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ವಿದೇಶ

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?