newsics.com
ಧೋನಿ ತನ್ನ ಸರಳತೆಯಿಂದ ಆಗಾಗ ಇಡೀ ಜಗತ್ತಿನ ಗಮನ ಸೆಳೀತಾ ಇರ್ತಾರೆ. ಇದೇ ಕಾರಣಕ್ಕೆ ಧೋನಿ ಬಹುತೇಕರಿಗೆ ಇಷ್ಟ ಆಗೋದು ಕೂಡ. ಇದೀಗ ಮತ್ತೆ ಸುದ್ದಿಯಲ್ಲಿರೋದು ಮತ್ತೆ ಇದೇ ಸರಳತೆಯ ಕಾರಣಕ್ಕೆ.
ಇತ್ತೀಚೆಗೆ ಧೋನಿಯ ಸ್ನೇಹಿತರೊಬ್ಬರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ಬರ್ತ್ಡೇ ಸೆಲಬ್ರೇಶನ್ಗೆ ಧೋನಿ ಸರ್ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ಸಾಮಾನ್ಯನಂತೆ ನಿಂತು ಗೆಳೆಯನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ಕೇಕ್ ಕಟ್ ಮಾಡಿದ ಗೆಳೆಯ ಧೋನಿ ಕೇಕ್ ತಿನ್ನಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಧೋನಿ ಪಕ್ಕದಲ್ಲಿದ್ದವರಿಗೆ ತಿನ್ನಿಸಲು ಸೂಚಿಸಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆ ಬಳಿಕ ತಾವು ಮುಂದೆ ಬಂದು ಗೆಳೆಯನಿಗೆ ಮೊದಲು ಕೇಕ್ ತಿನ್ನಿಸಿದ್ದಾರೆ. ಈ ವೇಳೆ ಸಂತೋಷದಲ್ಲಿ ಗೆಳೆಯ ಆನಂದಭಾಷ್ಪ ಸುರಿಸಿದ್ದಾರೆ.
ಈ ವರ್ಷ ಮಾತ್ರವಲ್ಲ.. ಕಳೆದ ವರ್ಷ ಕೂಡ ಧೋನಿ ತಮ್ಮ ಗೆಳೆಯನ ಹುಟ್ಟುಹಬ್ಬದ ಸೆಲಬ್ರೇಷನ್ನಲ್ಲಿ ಭಾಗಿಯಾಗಿದ್ದರು.
https://www.instagram.com/p/DLP0W0lPLlR/?img_index=1&igsh=bmVkcTJ6eTNhNDRl