newsics.com
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವಸು ಪಾತ್ರದಲ್ಲಿ ನಟಿ ಸೌಮ್ಯಾ ಮೆಂಡನ್ ಅಭಿನಯಿಸುತ್ತಿದ್ದಾರೆ. ನಟಿ ಸೌಮ್ಯಾ ಅವರು ಪುಟ್ಟಕ್ಕನ ಮಕ್ಕಳು, ಪಾರು, ಗೀತಾ, ಕಾವೇರಿ ಕನ್ನಡ ಮೀಡಿಯಂ ಸೇರಿದಂತೆ ಕೆಲ ಧಾರಾವಾಹಿ ನಟಿಸಿದ್ದಾರೆ.
ನಟಿ ಸೌಮ್ಯಾ ಅವರು ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸಿರೋ ನಟ ಸುವೇದ್ ದಾಸ್ ಜೊತೆ ಎಂಗೇಜ್ ಆಗಿದ್ದಾರೆ. ಇವರು ಕನ್ನಡ ಧಾರಾವಾಹಿ, ಸಿನಿಮಾ, ತುಳು ರಂಗದಲ್ಲಿಯೂ ಸಕ್ರಿಯವಾಗಿದ್ದಾರೆ.ಪಾರು ಧಾರಾವಾಹಿ ನಟಿ ಸಿತಾರಾ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟ ನಟಿಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.