newsics.com
ಬೆಂಗಳೂರು: ಐಶ್ವರ್ಯಾ ಗೌಡ ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಐಶ್ವರ್ಯಾ ಗೌಡಗೆ ಸಂಬಂಧಿಸಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಇಡಿ ಅಧಿಕಾರಿಗಳು, ಐಶ್ವರ್ಯಾ ಗೌಡಗೆ ಸಂಬಂಧಿಸಿದ ಅಂದಾಜು 3.98 ಕೋಟಿ ಮೌಲ್ಯದ ಫ್ಲಾಟ್‌ಗಳು, 2.01 ಕೋಟಿ ವೆಚ್ಚದ ನಿರ್ಮಾಣ ಹಂತದ ಕಟ್ಟಡ, ಜಮೀನ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಗದು ಹಾಗೂ ಐಶ್ವರ್ಯ ಬಳಸುತ್ತಿದ್ದ ವಾಹನಗಳು ಸೇರಿ 1.97 ಕೋಟಿ ಮೌಲ್ಯದಷ್ಟು ವಸ್ತು ಈಗ ಇಡಿ ವಶದಲ್ಲಿವೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಹಲವರಿಗೆ ವಂಚನೆ ಎಸಗಿರುವ ಆರೋಪ ಕೇಳಿಬಂದಿದ್ದು, ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 9.82 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಮೇಲೆ ಅವರ ವಂಚನೆಗಳು ಹೊರ ಬಂದಿದ್ದವು.