Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ಜತೆ ಹೋರಾಡಿದ್ದ ಅಪರ್ಣಾ ಧೀರೆ… ಪತಿ ನಾಗರಾಜ್ ವಸ್ತಾರೆ ಕಂಬನಿ
ಕರ್ನಾಟಕಪ್ರಮುಖಮನರಂಜನೆ

ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ಜತೆ ಹೋರಾಡಿದ್ದ ಅಪರ್ಣಾ ಧೀರೆ… ಪತಿ ನಾಗರಾಜ್ ವಸ್ತಾರೆ ಕಂಬನಿ

Share
1 Min Read
SHARE

newsics.com
ಬೆಂಗಳೂರು: ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಇತ್ತ ಪ್ರೀತಿಯ ಮಡದಿ ಕಳೆದುಕೊಂಡು ಪತಿ ನಾಗರಾಜ್ ವಸ್ತಾರೆ (Nagaraj Ramaswamy Vastarey) ಭಾವುಕರಾಗಿದ್ದಾರೆ.
ಅಪರ್ಣಾ ವಿಧಿವಶರಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಾಜ್‌ ವಸ್ತಾರೆ, ತುಂಬಾ ಖಾಸಗಿಯಾಗಿ ಬದುಕಿದವಳು ಅಪರ್ಣಾ, ಅಷ್ಟೇ ಖಾಸಗಿಯಾಗಿ ಬೀಳ್ಕೊಡಲು ಬಯಸುತ್ತೇನೆ. ಅವಳು ನನಗೆ ಸಲ್ಲೋದಕ್ಕೆ ಮುಂಚೇನೇ ಕರ್ನಾಟಕಕ್ಕೆ ಸೇರಿದವಳು. ಮಾಧ್ಯಮದವರ ಮುಂದೆಯೇ ನಿಂತು ಏನಾಯ್ತು ಅಂತಾ ಹೇಳಬೇಕು ಅನ್ನೋದು ಅವಳ ಆಸೆಯಾಗಿತ್ತು. ಅಷ್ಟನ್ನೇ ನಾನು ಹೇಳ್ತಿದ್ದೀನಿ ಎಂದರು.
ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್‌ (Lung cancer) ಇರುವುದು ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದಾಗ ವೈದ್ಯರು ಇನ್ನೂ 6 ತಿಂಗಳು ಬದುಕಿದರೆ ಹೆಚ್ಚು ಎಂದು ಹೇಳಿದ್ದರು. ಆದ್ರೆ ಅವಳು ಛಲಗಾತಿ, ಏನಾದರೂ ಗೆದ್ದೇ ಗೆಲ್ಲುತ್ತೇನೆ ಅನ್ನುವ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಹೋರಾಡಿದಳು. ಆದ್ರೆ ಕಳೆದ ಫೆಬ್ರವರಿ ತಿಂಗಳಿನಿಂದ ಸೋತಿದ್ದಳು. ಏಕೆಂದರೆ ಇದು ದೇಹವೇ ದೇಹವನ್ನು ಬಾಧಿಸುವ ವ್ಯಾಧಿ, ನಾನು ಅರಿತಿರುವ ಹಾಗೆಯೇ ಕ್ಯಾನ್ಸರ್‌ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಹೇರಲು ಬಯಸುತ್ತೆ. ಅವಳು ಧೀರೆ, ಇಷ್ಟು ವರ್ಷ ಸಾಧ್ಯವಾದಷ್ಟೂ ಮಣಿಸಿದಳು. ಆದರೀಗ ನಾವಿಬ್ಬರೂ ಜಂಟಿಯಾಗಿ ಸೋತಿದ್ದೇವೆ ಎಂದು ಕಣ್ಣೀರಿಟ್ಟರು.
ಮುಂಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು. ಅವಳ ದೇಹ ಅನ್ನೋದು ಮಾಯಕ ಅನ್ನೋದು ತೋರುತ್ತದೆ. ಏಕೆಂದರೆ ನಿಜವಾದ ವಯಸ್ಸನ್ನು ಯಾವತ್ತೂ ತೋರಿಸಲಿಲ್ಲ. 9:30ರ ಹೊತ್ತಿನಲ್ಲಿ ದೇಹ ತನ್ನನ್ನು ತಾನು ಹಿಂಪಡೆದುಕೊಂಡಿತು ಎಂದು ಭಾವುಕರಾದರು.

ನುಡಿನಮನ… ಅಪರ್ಣಾ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು…

ಸಿನಿಮಾ, ಟಿವಿ, ಸಾಹಿತ್ಯ ಲೋಕದಲ್ಲಿ ಸೈ ಎನಿಸಿಕೊಂಡಿದ್ದ ಅಪರ್ಣಾ…

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ

TAGGED:Aparnawho has been fighting lung cancer for two years... husband Nagaraj is in pain
Share This Article
Facebook Twitter Copy Link Print
Previous Article ನುಡಿನಮನ… ಅಪರ್ಣಾ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು…
Next Article ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ, ಶುಕ್ರವಾರ 12-07-2024

Popular Posts

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

You Might Also Like

ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read
ಪ್ರಮುಖಪಂಚಾಂಗ

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read
ಕರ್ನಾಟಕಪ್ರಮುಖ

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?