newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
12 ಜುಲೈ 2024, ಶುಕ್ರವಾರ
ಅಗಡಿ ನಾರಾಯಣ ಭಗವಾನರ ಜಯಂತಿ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 12/07/2024
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ಷಷ್ಠಿ12:32:12
ಪಕ್ಷ – ಶುಕ್ಲ
ನಕ್ಷತ್ರ – ಉತ್ತರ ಫಾಲ್ಗುಣಿ 16:07:40
ಯೋಗ – ಪರಿಘ 29:13:14*
ಕರಣ – ತೈತುಲ 12:32:12
ಕರಣ – ಗರಜ 25:49:07*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ಮಿಥುನ
ಋತು ಗ್ರೀಷ್ಮ
ಅಯನ ಉತ್ತರಾಯಣ
ಸೂರ್ಯೋದಯ 06:01:31
ಸೂರ್ಯಾಸ್ತ 18:49:06
ಹಗಲಿನ ಅವಧಿ 12:47:34
ರಾತ್ರಿಯ ಅವಧಿ 11:12:42
ಚಂದ್ರೋದಯ 11:04:38
ಚಂದ್ರಾಸ್ತ 23:21:16
ರಾಹು ಕಾಲ 10:49 – 12:25 ಅಶುಭ
ಯಮಘಂಡ ಕಾಲ 15:37 – 17:13 ಅಶುಭ
ಗುಳಿಕ ಕಾಲ 07:37 – 09:13
ಅಭಿಜಿತ್ 11:59 – 12:51 ಶುಭ
ದುರ್ಮುಹೂರ್ತ 08:35 – 09:26 ಅಶುಭ
ದುರ್ಮುಹೂರ್ತ 12:51 – 13:42 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಗಡಿಯಾರದ ಮುಳ್ಳುಗಳು ನಿರಂತರ ಚಲನೆಯಲ್ಲಿರುವಂತೆ ನಮ್ಮ ಬದುಕೂ ಚಲನಶೀಲವಾಗಿರಬೇಕು.
– ಸ್ಯಾಮ್ ಲೆವೆನ್ಸನ್
***
ಇಂದಿನ ಇತಿಹಾಸ
12 ಜುಲೈ
ಪ್ರಮುಖ ಘಟನೆಗಳು
– ಬಹಲೂಲ್ ಖಾನ್ ಲೋದಿ – ಲೋದಿ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಬಹಲೂಲ್ ಖಾನ್ ಲೋದಿ ಜುಲೈ 12, 1489 ರಂದು ಭಾರತದ ದೆಹೆಲಿಯಲ್ಲಿ ನಿಧನರಾದರು.
– ಮತಿಘಟ್ಟ ಕೃಷ್ಣಮೂರ್ತಿ – ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನಲ್ಲಿ ಜುಲೈ 12, 1912 ರಂದು ಜನಿಸಿದರು. 50 ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ. ಜಾನಪದ ರತ್ನ, ಜಾನಪದ ತಜ್ಞ, ಜಾನಪದ ಭೀಷ್ಮ, ಹಾಸನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿದೆ.
– ಶಿವರಾಜ್‍ಕುಮಾರ್ – 1961 ಜುಲೈ 12 ರಂದು ಜನಿಸಿದರು. ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
Good Morning Krodhi Samvatsara Uttarayana Greeshma Ritu Ashadha Masa Shukla Paksha Shashti Friday 12-07-2024