Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ನೆನಪು > ನುಡಿನಮನ… ಅಪರ್ಣಾ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು…
ಅನಾವರಣಕರ್ನಾಟಕನೆನಪುಪ್ರಮುಖಮನರಂಜನೆ

ನುಡಿನಮನ… ಅಪರ್ಣಾ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು…

Share
2 Min Read
SHARE

ನುಡಿನಮನ

newsics.com
ಎಲ್ಲರ ಬಗ್ಗೆಯೂ ಪ್ರೀತಿ, ಅಭಿಮಾನ ತೋರುತ್ತಿದ್ದ, ಹಮ್ಮು ಬಿಮ್ಮಿಲ್ಲದೆ ಎಲ್ಲರೊಳಗೊಂದಾಗುತ್ತಿದ್ದ ನಟಿ, ನಿರೂಪಕಿ, ಧ್ವನಿ ದಾನ ಕಲಾವಿದೆ, ಬರಹಗಾರ್ತಿ ಅಪರ್ಣಾ ವಸ್ತಾರೆ ಇನ್ನು ನೆನಪು ಮಾತ್ರ.

ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿ ಮೂಲದವರಾದ ಅಪರ್ಣಾ ರಾಜ್ಯಕ್ಕೇ ಚಿರಪರಿತರು. 1985ರಲ್ಲಿ ಮಸಣದ ಹೂವು ಚಿತ್ರದ ಮೂಲಕ ಅಪರ್ಣಾ ಸಿನಿ ರಂಗ ಪ್ರವೇಶ ಮಾಡಿದ್ದರು.
ಈ‌ ಅಕ್ಟೋಬರ್‌ಗೆ 58ನೇ ವರ್ಷಕ್ಕೆ ಹೆಜ್ಜೆಯಿಡುವ ಮೊದಲೇ ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ಗುರುವಾರ (ಜುಲೈ 11) ಅಪರ್ಣಾ ಕೊನೆಯುಸಿರು ಚೆಲ್ಲಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಅವರ ಜೀವವನ್ನು ಬಿಡಲೇ ಇಲ್ಲ.

ಅಪರ್ಣಾ ಅವರ ಆಸೆ, ಕನಸೂ ಆಗಿದ್ದ ನಿರೂಪಣೆ ಕುರಿತ ಶಾಲೆ ತೆರೆಯುವ ಅವರ ಕನಸು ನನಸಾಗುವ ಮೊದಲೇ ಕ್ಯಾನ್ಸರ್ ಅವರ ಉಸಿರನ್ನು ಕಿತ್ತುಕೊಂಡಿದೆ.
ನಟಿಯಾಗಿ, ನಿರೂಪಕಿಯಾಗಿ, ಬರಹಗಾರ್ತಿಯಾಗಿ ಹಲವು ಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಅಪರ್ಣ ನಿಧನ ಸುದ್ದಿ ಆಘಾತ ತಂದಿದೆ. ಮೆಟ್ರೋದಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತು ಕಾಳಜಿ ವಹಿಸಿದ್ದ ಅಪರ್ಣಾ ತಾವೇ ಇಹಲೋಕ ತ್ಯಜಿಸಿರುವುದು ಕನ್ನಡಿಗರಿಗೆ ನೋವು ತರಿಸಿದೆ.
ಮೆಟ್ರೋ ಹತ್ತುವಾಗ, ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ. ಮುಂದಿನ ನಿಲ್ದಾಣ…, ಬಾಗಿಲುಗಳು ಬಲಕ್ಕೆ ತೆರೆಯಲಿವೆ… ಹೀಗೆ ಮೆಟ್ರೋ ಪ್ರಯಾಣಿಕರ ಕಾಳಜಿ ವಹಿಸಿ, ಮುಂದಿನ ನಿಲ್ದಾಣ, ಮೆಟ್ರೋ ಬಾಗಿಲು, ಶುಚಿತ್ವ ಸೇರಿದಂತೆ ಪ್ರತಿಯೊಂದನ್ನೂ ಸ್ಪಷ್ಟ ಕನ್ನಡದ ಮೂಲಕವೇ ಹೇಳುತ್ತಿದ್ದ ಇಂಪಾದ ಧ್ವನಿಯ ನಿರೂಪಕಿ, ನಟಿ ಅಪರ್ಣ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು.
ಮೆಟ್ರೋ ಮಾತ್ರವಲ್ಲ, ಟಿವಿ ಕಾರ್ಯಕ್ರಮದಲ್ಲಿ ನಿರೂಪಣೆ, ಸರ್ಕಾರಿ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳ ನಿರೂಪಣೆ, ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮ, ಚಂದನ ವಾಹಿನಿಯಲ್ಲಿ ನಿರೂಪಣೆ, ಹಿನ್ನೆಲೆ ಧ್ವನಿ ಸೇರಿದಂತೆ ಹಲವು ರೀತಿಯಲ್ಲಿ ಅಪರ್ಣಾ ಕನ್ನಡಗಿರ ಮನೆ ಮಾತಾಗಿದ್ದರು.

ಅಪರ್ಣ ಅಭಿನಯಿಸಿದ ಸಿನಿಮಾಗಳು

ಮಸಣದ ಹೂವು (1985)
ಸಂಗ್ರಾಮ (1987)
ನಮ್ಮೂರ ರಾಜ (1988)
ಸಾಹಸ ವೀರ (1988)
ಮಾತೃ ವಾತ್ಸಲ್ಯ (1988)…ರೋಹಿಣಿ
ಒಲವಿನ ಆಸರೆ (1989)
ಇನ್‌ಸ್ಪೆಕ್ಟರ್ ವಿಕ್ರಮ್ (1989)
ಒಂದಾಗಿ ಬಾಲು (1989)
ಡಾಕ್ಟರ್ ಕೃಷ್ಣ (1989)
ಒಂಟಿ ಸಲಗ (1989)
ಚಕ್ರವರ್ತಿ (1990)
ಗ್ರೇ ಗೇಮ್ಸ್ (2024)…ತಾರಾ

ಮೂಡಲಮನೆ, ಮುಕ್ತ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಅಪರ್ಣ ನಟಿಸಿದ್ದಾರೆ.

ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದಾರೆ. 2013ರಲ್ಲಿ ಕನ್ನಡದಲ್ಲಿ ಮೊದಲ ಆವೃತ್ತಿ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭಗೊಂಡಿತ್ತು. ಮೊದಲ ಆವೃತ್ತಿಯಲ್ಲಿ ಅಪರ್ಣಾ ಸ್ಪರ್ಧಿಯಾಗಿ ಜನರ ಮನ ಗೆದ್ದಿದ್ದರು.

ಬಿಗ್‌ಬಾಸ್ ಬಳಿಕ 2015ರಲ್ಲಿ ಮಜಾ ಟಾಕೀಸ್ ಮೂಲಕ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡರು. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಹಾಸ್ಯ ಮನೋರಂಜನಾ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಅಪರ್ಣಾ ಕಾಣಿಸಿಕೊಂಡಿದ್ದರು.

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ

ಸಿನಿಮಾ, ಟಿವಿ, ಸಾಹಿತ್ಯ ಲೋಕದಲ್ಲಿ ಸೈ ಎನಿಸಿಕೊಂಡಿದ್ದ ಅಪರ್ಣಾ…

TAGGED:reminiscence... Aparna should not have knocked on the house of death so soon...
Share This Article
Facebook Twitter Copy Link Print
Previous Article ಸಿನಿಮಾ, ಟಿವಿ, ಸಾಹಿತ್ಯ ಲೋಕದಲ್ಲಿ ಸೈ ಎನಿಸಿಕೊಂಡಿದ್ದ ಅಪರ್ಣಾ…
Next Article ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ಜತೆ ಹೋರಾಡಿದ್ದ ಅಪರ್ಣಾ ಧೀರೆ… ಪತಿ ನಾಗರಾಜ್ ವಸ್ತಾರೆ ಕಂಬನಿ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?