newsics.com
ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 270ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ದುರಂತದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕಳೆದುಕೊಂಡಿದ್ದಾನೆ.ಯುವಕನೊಬ್ಬ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕ್ತಾ ಇರೋ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು.
ಅಹಮದಾಬಾದ್‌ನಿಂದ ಏರ್ ಇಂಡಿಯಾ ಫ್ಲೈಟ್ ಲಂಡನ್‌ಗೆ ಟೇಕ್‌ಅಫ್ ಆಗಿತ್ತು. ಟೇಕ್‌ಅಫ್ ಆಗಿ ಒಂದು ನಿಮಿಷ ಆಗೋದ್ರಲ್ಲಿ ಇಡೀ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೇಲ್ ಮೇಲೆ ಬಿದ್ದು ಧಗಧಗಿಸಿ ಉರಿದು ಬೂದಿಯಾಗಿತ್ತು. ಫ್ಲೈಟ್‌ನಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಸಜೀವ ದಹನವಾಗಿದ್ರೆ, ರಸ್ತೆಯಲ್ಲಿ ಹೋಗ್ತಾ ಇದ್ದವ್ರು. ಹಾಸ್ಟೇಲ್‌ನಲ್ಲಿ ಊಟ ಮಾಡ್ತಾ ಇದ್ದವು ಎಲ್ಲರನ್ನೂ ಸೇರಿದ್ರೆ ಈ ದುರಂತದಲ್ಲಿ ಸಾವನಾಪ್ಪಿದ್ದಾರೆ.
ಏರ್ ಇಂಡಿಯಾ ಗಗನಸಖಿ ಮನೀಷಾ ಥಾಪ ಕೂಡ ಒಬ್ಬಳು. ಮನೀಷಾ ಅಗಲಿಕೆಯಿಂದ ಬಿಹಾರದ ಪಾಟ್ನಾದಲ್ಲಿರೋ ಆಕೆಯ ಇಡೀ ಕುಟುಂಬ ಚೇತರಿಸಿಕೊಂಡಿಲ್ಲ. ಹಾಗೇ ಆಕೆಯ ಗೆಳೆಯ ಸಾಗರ್ ಪಾಟೀಲ್‌ಗೂ ಏನ್ ಮಾಡ್ಬೇಕು ಅಂತಾ ದಿಕ್ಕೆ ತೋಚುತ್ತಿಲ್ಲ. ಘೋರ ದುರಂತ ನಡೆದು ಒಂದ್ ವಾರವಾದ್ರೂ ಇನ್ನೂ ಸಹಿಸಿಕೊಳ್ಳಲಾಗದ ನೋವಲ್ಲಿ ಸಾಗರ್‌ಗೆ ಸರಿಯಾಗಿ ಊಟ ಮಾಡಲಾಗದೇ, ನಿದ್ರೆಗೆ ಜಾರಲಾಗದೇ ವಿಲವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ಜನ ನನ್ನೊಂದಿಗೆ ಎಂದಿಗೂ ಇರಬೇಕು ಅಂತ ನಾನು ಆಸೆಪಡ್ತಿದ್ದೆ. ನನ್ನನ್ನ ಜನ ಇಷ್ಟ ಪಡಬೇಕು ಎಂದು ಆಸೆ ಪಡ್ತಿದ್ದೆ. ಆದರೆ ಆಕೆ ಬದುಕು ಎಷ್ಟು ಖಾಸಗಿರುತ್ತೋ? ಅಷ್ಟು ಸರಿ ಇರುತ್ತೆ ಅಂತ ಹೇಳ್ತಿದ್ಲು. ಯಾರ ದೃಷ್ಟಿಯೂ ಬೀಳಲ್ಲ ಅಂತಿದ್ಲು. ಆದರೆ ಗೊತ್ತಿಲ್ಲ ಯಾರ ದೃಷ್ಟಿ ಬಿತ್ತು ಅಂತ. ಹೋಗ್ತಾ ಹೋಗ್ತಾ ಆಕೆ ನನಗೆ ಪ್ರಪಂಚದ ಪ್ರೀತಿ ಕೊಟ್ಟು ಹೋದಳು. ಹೆಸರು ಕೊಟ್ಳು.. ಜನರ ಪ್ರೀತಿಯನ್ನು ಕೊಟ್ಟು ಹೋದಳು. ಅವಳು ನನ್ನ ಲಕ್ಕಿ ಚಾರ್ಮ್.. ಯಾವತ್ತೂ ಲಕ್ಕಿ ಚಾರ್ಮ್ ಆಗಿರುತ್ತಾಳೆ. ನಾನು ಒಳಗಿಂದ ಚೂರು ಚೂರಾಗಿದ್ದೀನಿ. ಆದರೆ ನಿಮ್ಮ ಪ್ರೀತಿ ನನ್ನನ್ನ ಸಂಭಾಳಿಸಿತು. ನನ್ನನ್ನ ನಾನು ಗುಣಪಡಿಸಿಕೊಳ್ಳುವುದಕ್ಕೆ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳ ಬಯಸುತ್ತೇನೆ. ಹೀಗೆ ನನ್ನ ಜೊತೆಗಿರಿ. ನೀವು ನನ್ನ ಜೊತೆಗಿರುವುದು ನನಗೆ ಸ್ಫೂರ್ತಿ ತುಂಬುತ್ತೆ. ನನ್ನನ್ನ ಒಳ್ಳೆ ಮನುಷ್ಯನನ್ನಾಗಿ ಮಾಡುತ್ತೆ. ಐ ಮಿಸ್ ಹರ್.- ಸಾಗರ್ ಪಾಟೀಲ್, ಮನೀಷಾ ಸ್ನೇಹಿತ
https://www.instagram.com/p/DLFM8J1PQ8x/?img_index=1&igsh=YWd1M3F1azRleXBl