newsics.com
ಇನ್ಮುಂದೆ ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ.
ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ (ನಿಷೇಧ) ಮಸೂದೆ-2025ರ ರೂಪದಲ್ಲಿ ಈ ಕಾನೂನನ್ನು ಸಿದ್ಧಪಡಿಸಲಾಗಿದ್ದು, ಇದರ ಅಡಿಯಲ್ಲಿ ಸುಳ್ಳು ಸುದ್ದಿ ಹಂಚಿಕೊಂಡವರಿಗೆ ಜೈಲು ಶಿಕ್ಷೆ ಮತ್ತು ದಂಡ ಕೂಡ ವಿಧಿಸಲಾಗುತ್ತದೆ.
ಇನ್ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ್ರೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ, 10 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸುವ ಪ್ರಸ್ತಾಪವಿದೆ. ಈ ಮಸೂದೆಯು ಸಾರ್ವಜನಿಕ ಭದ್ರತೆ, ಸಾಮಾಜಿಕ ಸಾಮರಸ್ಯ, ಮತ್ತು ಮುಕ್ತ-ನ್ಯಾಯಸಮ್ಮತ ಚುನಾವಣೆಗೆ ಧಕ್ಕೆ ತರುವ ಪೋಸ್ಟ್‌ಗಳಿಗೂ ಶಿಕ್ಷೆಯನ್ನು ಒಳಗೊಂಡಿದೆ.