newsics.com
ವಿಜಯನಗರ: ಈಜಲು ತೆರಳಿದ್ದ ಇಬ್ಬರು ಬಾಲಕರು ಚೆಕ್ ಡ್ಯಾಂ ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲೂಕಿನ ಕಾರಿಗನೂರಿನಲ್ಲಿ ಶನಿವಾರ ಸಂಭವಿಸಿದೆ.
ಕಾರಿಗನೂರಿನ ಆರ್‌ಬಿಎಸ್‌ಎಸ್‌ಎನ್ ಕ್ಯಾಂಪ್ ನಿವಾಸಿಗಳಾದ ಹನುಮಂತ(14), ಅರವಿಂದ(14) ಮೃತಪಟ್ಟ ಬಾಲಕರು.
ಈ ಬಾಲಕರು ತಮ್ಮ ಸ್ನೇಹಿತರೊಂದಿಗೆ ಗ್ರಾಮದ ರೈಲ್ವೇ ಟ್ರ್ಯಾಕ್ ಸಮೀಪದ ಗುಡ್ಡದ ತಿಮ್ಮಪ್ಪನ ಗುಡಿ ಪಕ್ಕದಲ್ಲಿರುವ ಚೆಕ್ ಡ್ಯಾಂನಲ್ಲಿ ಮಧ್ಯಾಹ್ನ ಈಜಲು ತೆರಳಿದ್ದರು. ಆದರೆ, ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Imprisonment ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ರೆ ಜೈಲು ಶಿಕ್ಷೆ ಫಿಕ್ಸ್
Iran-Israel War ಮೊದಲ ಬಾರಿಗೆ ಇರಾನ್ ವಿರುದ್ಧ ಭಾರತದ ಬರಾಕ್ ಕ್ಷಿಪಣಿ ವ್ಯವಸ್ಥೆ ಬಳಸಿದ ಇಸ್ರೇಲ್
ಬೆಂಕಿ ತಗುಲಿ ಹಾಟ್ ಬಲೂನ್ ಪತನ: 8 ಮಂದಿ ಸಾವು – ಆಘಾತಕಾರಿ ವಿಡಿಯೋ ನೋಡಿ
ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು ವಂಚನೆ – ಮಹಿಳೆ ವಿರುದ್ಧ ದೂರು ದಾಖಲು