newsics.com
ಕರ್ನಾಟಕದ ಕರಾವಳಿ-ಮಲೆನಾಡಿನ ಮುಟ್ಟಾಳೆಗೆ ಜಪಾನಿ ಜನರು ಫಿದಾ ಆಗಿದ್ದಾರೆ.
ಟ್ರೈನಿಂಗ್‌ಗೆಂದು ಜಪಾನ್‌ಗೆ ತೆರಳಿದ್ದ ಕುಡ್ಲದ ಯುವತಿಯೊಬ್ಬರು ಕೃಷಿ ಮತ್ತು ಶ್ರಮ ಸಂಸ್ಕೃತಿಯ ಪ್ರತೀಕವೆನಿಸಿದ್ದ ಮುಟ್ಟಾಳೆಯನ್ನು ಜಪಾನಿಗರಿಗೆ ಪರಿಚಯಿಸಿದ್ದಾರೆ. ಈ ಮುಟ್ಟಾಳೆಗೆ ವಿದೇಶಿಗರು ಫಿದಾ ಆಗಿದ್ದಾರೆ.
ಜಪಾನ್‌ನಲ್ಲಿ ಹೋಂಡ ಕಂಪನಿಯ ಅಸೋಸಿಯೇಷನ್ ಆಯೋಜಿಸುತ್ತಿರುವ ಈಯರ್ಡ್ಸ್ ಫೋರಂ ಎಂಬ ತರಬೇತಿ ಕಾರ್ಯಕ್ರಮಕ್ಕೆ ಭಾರತದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಅದರಲ್ಲಿ ಒಬ್ಬರು ಮಂಗಳೂರಿನ ನಂತೂರು ನಿವಾಸಿ ಬಿಂದಿಯಾ ಶೆಟ್ಟಿ ಎಂಬುವರೇ ತುಳುನಾಡಿನ ಮುಟ್ಟಾಳೆಯನ್ನು ಜಪಾನಿಗರಿಗೆ ಪರಿಚಯಿಸಿದವರು. ಸದ್ಯ ಇವರು ಬೆಂಗಳೂರಿನಲ್ಲಿ ಸಂವಾದ ಎಂಬ ಎನ್‌ಜಿಒ ನಡೆಸುತ್ತಿರುವ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ. ಸದ್ಯ ಇವರು. ಮತ್ತೋರ್ವರು ಮಧ್ಯಪ್ರದೇಶದವರಾಗಿದ್ದಾರೆ.
ತರಬೇತಿಗೆ ಆಯ್ಕೆಯಾದ ಎಲ್ಲರೂ ತಮ್ಮ ದೇಶದ ವಿಶೇಷತೆಯನ್ನು ಪರಿಚಯ ಮಾಡಬೇಕು. ಇದಕ್ಕಾಗಿ ಬಿಂದಿಯಾ ಶೆಟ್ಟಿ ತುಳುನಾಡಿನ ಕೃಷಿ ಹಾಗೂ ಶ್ರಮ ಸಂಸ್ಕೃತಿಯ ಪ್ರತೀಕವೆನಿಸಿದ ಅಡಕೆ ಹಾಳೆಯ ಮುಟ್ಟಾಳೆಯನ್ನು ಪರಿಚಯಿಸಿದ್ದಾರೆ. ಅಲ್ಲದೆ ಮುಟ್ಟಾಳೆ ಯಾವುದರಿಂದ ಮಾಡಲಾಗುತ್ತದೆ. ಕೃಷಿ ಕೆಲಸ ಮಾಡುವಾಗ ಮುಟ್ಟಾಳೆಯನ್ನು ತಲೆಗೆ ಧರಿಸುತ್ತಾರೆ. ಅದರ ವಿಶೇಷತೆಯೇನು ಎಂಬುದನ್ನು ತಿಳಿಸಿದ್ದಾರೆ. ಇದನ್ನು ಕಂಡು ಬೆರಗಾದ ಜಪಾನಿಗರು ಮುಟ್ಟಾಳೆಯನ್ನು ಧರಿಸಿ ಸಂಭ್ರಮಿಸಿದ್ದಾರೆ.
ಬಿಂದಿಯಾ ಶೆಟ್ಟಿಯವರು ಒಟ್ಟು 30 ಮುಟ್ಟಾಳೆಯನ್ನು ತಮ್ಮೊಂದಿಗೆ ಕೊಂಡೊಯ್ದು, ಅಲ್ಲಿ ಎಲ್ಲರಿಗೂ ಹಂಚಿದ್ದಾರೆ.
Iran-Israel War ಮೊದಲ ಬಾರಿಗೆ ಇರಾನ್ ವಿರುದ್ಧ ಭಾರತದ ಬರಾಕ್ ಕ್ಷಿಪಣಿ ವ್ಯವಸ್ಥೆ ಬಳಸಿದ ಇಸ್ರೇಲ್
Vaishnavi Gowda ಪತಿ ಜೊತೆಗೆ ಬಂಗೀ ಜಂಪ್ ಮಾಡಿದ ವೈಷ್ಣವಿ ಗೌಡ – ವೈರಲ್ ವಿಡಿಯೋ ನೋಡಿ