newsics.com
ನವದೆಹಲಿ : ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗಿರುವ ಸಂಘರ್ಷದ ಹಿನ್ನೆಲೆ 290 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನವು ಶುಕ್ರವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಇರಾನ್ನಿಂದ ಸ್ಥಳಾಂತರಿಸಲಾದ ಭಾರತೀಯ ಪ್ರಜೆಗಳನ್ನು ಹೊತ್ತ ಮತ್ತೊಂದು ವಿಮಾನ ದೆಹಲಿ ತಲುಪಿತು. ವಿಮಾನ ನಿಲ್ದಾಣದಿಂದ ಹೊರಬರುವಾಗ ಜನರು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು.
ಇರಾನ್ನಿಂದ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಕಾರ್ಯಾಚರಣೆಯಾದ ಆಪರೇಷನ್ ಸಿಂಧು ಅನ್ನು ಭಾರತ ಪ್ರಾರಂಭಿಸಿದೆ.
ಯುದ್ಧಪೀಡಿತ ಇರಾನ್ ನಿಂದ 290 ಭಾರತೀಯರು ವಾಪಸ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ 290 ವಿದ್ಯಾರ್ಥಿಗಳು ಬಂದಿಳಿದಿದ್ದು, ಅವರು ಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಲಾಗಿದೆ. ಆಪರೇಷನ್ ಸಿಂಧು ಹೆಸರಿನಲ್ಲಿ ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗಿದ್ದು, 290 ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಇರಾನ್ ನಿಂದ ದೆಹಲಿಗೆ 16 ಮಂದಿ ಕನ್ನಡಿಗರು ಕೂಡ ಆಗಮಿಸಿದ್ದಾರೆ. ಇವರು ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಬೆಳಗ್ಗೆ 7:30ರ ವಿಮಾನದಲ್ಲಿ ದೆಹಲಿಯಿಂದ ಎಂಟು ಮಂದಿ ಪ್ರಯಾಣ ಬೆಳೆಸಲಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಒಟ್ಟು 290 ಜನ ಪಾಪಸಾಗಿದ್ದಾರೆ. ಜಮ್ಮು ಕಾಶ್ಮೀರದ 190, ಉತ್ತರ ಪ್ರದೇಶದ 42, ಕರ್ನಾಟಕದ 16, ದೆಹಲಿಯ 12, ಮಹಾರಾಷ್ಟ್ರದ 8, ಹರಿಯಾಣದ 7, ಬಿಹಾರ, ಪಶ್ಚಿಮ ಬಂಗಾಳದ ಇಬ್ಬರು, ಮಧ್ಯಪ್ರದೇಶದ ಇಬ್ಬರು, ಜಾರ್ಖಂಡ್ ನ ಓರ್ವ ಹಾಗೂ ವಿವಿಧ ರಾಜ್ಯದ 10 ಮಂದಿ ವಾಪಸ್ ಆಗಿದ್ದಾರೆ.
International Yoga Day ಇಂದು ‘ಅಂತರಾಷ್ಟ್ರೀಯ ಯೋಗ’ ದಿನಾಚರಣೆ; ಆಚರಣೆಯ ಹಿಂದಿದೆ ಅಚ್ಚರಿಯ ಕಾರಣ