newsics.com
ನಟಿ ಸಮಂತಾ ರುತ್ ಪ್ರಭು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ಹೆಸರು. ಸಮಂತಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಮುಂಬೈನ ಬೀದಿಯಲ್ಲಿ ನಟಿ ಸಮಂತಾ ಗರಂ ಆಗಿದ್ದಾರೆ. ನಿನ್ನೆ ಮುಂಬೈನಲ್ಲಿ ಜಿಮ್ನಲ್ಲಿ ವರ್ಕೌಟ್ ಮುಗಿಸಿಕೊಂಡು ಹೊರಗೆ ಬಂದರು. ಆದರೆ ಅವರ ಕಾರು ಇನ್ನೂ ಬಂದಿರಲಿಲ್ಲ. ಹೀಗಾಗಿ ಫೋನಿನಲ್ಲಿ ಮಾತನಾಡುತ್ತಾ ರಸ್ತೆಗೆ ಬಂದ ಸಮಂತಾ ಅವರನ್ನು ನೋಡ ನೋಡುತ್ತಿದ್ದಂತೆ ಪಾಪರಾಜಿಗಳು ಫೋಟೋ ಮತ್ತು ವಿಡಿಯೋ ಮಾಡಲು ಮುಂದಾಗಿದ್ದಾರೆ.
ಇದರಿಂದ ಮುಜುಗರಕ್ಕೆ ಒಳಗಾದ ಸಮಂತಾ ಏಕಾಏಕಿ ಪಾಪರಾಜಿಗಳ ಮೇಲೆ ರೇಗಾಡಿದ್ದಾರೆ. ಮೊದಲು ಬೇಡ ಎಂದಿದ್ದಾರೆ. ಆದ್ರೆ ನಟಿ ಬೇಡ ಅಂತ ಹೇಳಿದ ಮೇಲು ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಂದಾಗಿದ್ದಾರೆ. ಆಗ ನೋಡಿ ಸಮಂತಾ ಏಕಾಏಕಿ ಗರಂ ಆಗಿದ್ದಾರೆ. ಇದೇ ಕೋಪದಲ್ಲಿ ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಅಂತ ಕೂಗಾಡಿದ್ದಾರೆ.
https://www.instagram.com/reel/DK_aYp4KN6J/?igsh=b3YwNjYwazRxdTZu