newsics.com
ಶಿವಮೊಗ್ಗ: ಕಾಂತಾರ ಚಾಪ್ಟರ್ -1ರ ಚಿತ್ರೀಕರಣಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರೀಕರಣದ ವೇಳೆಯಲ್ಲಿ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದ ಘಟನೆ ಸಂಬಂಧ 3 ದಿನಗಳಲ್ಲಿ ಉತ್ತರಿಸುವಂತೆ ಹೊಸನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.
ಈ ಸಂಬಂಧ ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದು, ದಿನಾಂಕ ಜೂನ್ 15ರಂದು ನಡೆದ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದಿರುವ ಘಟನೆ ಬಗ್ಗೆ ಸ್ಪಷ್ಟನೆ ನೀಡುವಂತೆ l ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದೆ.
ಕಾಂತಾರ ಚಿತ್ರತಂಡವು ಸಿನಿಮಾ ಚಿತ್ರೀಕರಣಕ್ಕಾಗಿ ವಿವಿಧ ಇಲಾಖೆಗಳಿಂದ ಪಡೆದ ಅನುಮತಿಯ ವಿವರಗಳು ಹಾಗೂ ದಾಖಲಾತಿಗಳನ್ನು ತಹಸಿಲ್ದಾರರಿಗೆ ಸಲ್ಲಿಸಬೇಕಿದೆ. ಈ ಕುರಿತು ತಾಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಚಿತ್ರೀಕರಣ ನಡೆಸಿರುವ ಆರೋಪ ಚಿತ್ರತಂಡದ ಮೇಲೆ ಮೂಡಿದೆ.