newsics.com
ಶಿವಮೊಗ್ಗ: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ಸಾಲು, ಸಾಲು ಅವಘಡದ ಸವಾಲುಗಳನ್ನ ಎದುರಿಸುತ್ತಿದೆ.ಹೊಸನಗರ ತಾಲೂಕಿನ ಮಾಸ್ತಿ ಕಟ್ಟೆಯ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ-1 ಚಿತ್ರೀಕರಣ ನಡೆಯುತ್ತಿದೆ. ಕಳೆದ ರಾತ್ರಿ ಶೂಟಿಂಗ್ ವೇಳೆ ಚಿತ್ರೀಕರಣದಲ್ಲಿ ಬಳಕೆಯಾದ ದೋಣಿ ಮಗುಚಿ 30 ಜನ ಅಪಾಯದಿಂದ ಪಾರಾಗಿದ್ದರು.
ಇದೀಗ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಚಿತ್ರತಂಡಕ್ಕೆ ನೊಟೀಸ್ ನೀಡಲು ಮುಂದಾಗಿದೆ.
ಇದೀಗ ಶಿವಮೊಗ್ಗ ಜಿಲ್ಲಾಧಿಕಾರಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಚಿತ್ರತಂಡ, ಶೂಟಿಂಗ್ಗೆ ಎಲ್ಲ ರೀತಿಯ ಪರವಾನಗಿಗಳನ್ನು ತೆಗೆದುಕೊಂಡಿದೆಯೇ, ಚಿತ್ರೀಕರಣದ ವೇಳೆ ಅಗತ್ಯ ಭದ್ರತಾ ಎಚ್ಚರಿಕೆಗಳನ್ನು ವಹಿಸಿದೆಯೇ ಎಂದು ಪರೀಕ್ಷಿಸಲು ಮುಂದಾಗಿದ್ದಾರೆ. ಸ್ಥಳೀಯ ಆಡಳಿತದಿಂದ ಕಾಂತರ ಶೂಟಿಂಗ್ ಅನುಮತಿ ಪಡೆದಿಲ್ಲ, ಎಲ್ಲಾ ಅನುಮತಿಯನ್ನ ಬೆಂಗಳೂರಿನಿಂದಲೇ ಪಡೆದಿರುವುದಾಗಿ ಪಡೆದಿರುವುದಾಗಿ ಚಿತ್ರ ತಂಡ ಹೇಳಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡಕ್ಕೆ ನೋಟೀಸ್ ಜಾರಿ ಮಾಡಿ ಶೂಟಿಂಗ್ ನ ಅನುಮತಿಯ ಪರವಾನಗಿಯನ್ನ ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ಹೇಳಿದ್ದಾರೆ.