newsics.com
ಬೆಂಗಳೂರು: ರಾಜ್ಯದಲ್ಲಿ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಕುರಿತಾದ ವಿಚಾರಣೆಯನ್ನು ಹೈಕೋರ್ಟ್ ಜೂನ್ 20ಕ್ಕೆ ಮುಂದೂಡಿದೆ.
ನಟ ಕಮಲ್ ಹಾಸನ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ನಂತರ ಕರ್ನಾಟಕದಲ್ಲಿ ಅವರ ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ಕೇಳಿ ಬಂದಾಗ ಸಿನಿಮಾ ರಿಲೀಸ್ ಮಾಡೋಕೆ ಭದ್ರತೆ ಕೊಡಬೇಕು, ಸಿನಿಮಾ ನೋಡಲು ಬರೋರಿಗೆ ರಕ್ಷಣೆ ಕೊಡಬೇಕು ಅಂತ ಹೈ ಕೋರ್ಟ್ನ ಮೆಟ್ಟಿಲೇರಿದ್ದರು.
ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಅವರು ಅನಗತ್ಯ ವಿವಾದ ಹುಟ್ಟುಹಾಕಿದರು. ಈ ಹೇಳಿಕೆಯಿಂದ ಕಮಲ್ ಹಾಸನ್ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ.