newsics.com
ಅಹಮದಾಬಾದ್: ಅಹಮದಾಬಾದ್ ವಿಮಾನ ದುರಂತ ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಒಪ್ಪಂದದ ಪ್ರಕಾರ2025 ರಿಂದ ಏರ್ಇಂಡಿಯಾದ ದೊಡ್ಡ ವಿಮಾನಗಳ ನಿರ್ವಹಣೆಯನ್ನು ಟರ್ಕಿ ಕಂಪನಿ ವಹಿಸಿಕೊಂಡಿತ್ತು. ಇತ್ತೀಚೆಗೆ ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಟರ್ಕಿ ಭಾರತಕ್ಕೆ ದ್ರೋಹ ಬಗೆದು ಪಾಕಿಸ್ತಾನದ ಬೆಂಬಲಕ್ಕೆ ನಿಂತಿತ್ತು. ಅಲ್ಲದೆ, ಶಸ್ತ್ರಾಸ್ತ್ರಗಳ ನೆರವು ಕೂಡ ನೀಡಿತ್ತು. ಹೀಗಾಗಿ, ವಿಮಾನ ಪತನದಲ್ಲಿ ಟರ್ಕಿ ಕೈವಾಡವಿರಬಹುದೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.
ಈ ಹಿಂದೆ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಮುಖರು
ಹೋಮಿ ಬಾಬಾ – ಭಾರತದ ಅಣುಶಕ್ತಿ ಪಿತಾಮಹ (1966),
ಸುರೇಂದ್ರ ಮೋಹನ್ ಕುಮಾರಮಂಗಲಂ (ಮಾಜಿ ಸಂಸದ 1973),
ಸಂಜಯ್ ಗಾಂಧಿ (1980),
ಮಾಧವ ರಾವ್ ಸಿಂಧಿಯಾ (ಮಾಜಿ ಕೇಂದ್ರ ಸಚಿವ 2001),
ಜಿಎಂಸಿ ಬಾಲಯೋಗಿ (ಲೋಕಸಭೆ ಮಾಜಿ ಸ್ಪೀಕರ್ 2002),
ನಟಿ ಸೌಂದರ್ಯ (ನಟಿ 2004),
ವೈ.ಎಸ್. ರಾಜಶೇಖರ ರೆಡ್ಡಿ (ಆಂಧ್ರಪ್ರದೇಶ ಸಿಎಂ-2009),
ದೋರ್ಜಿ ಖಂಡು (ಅರುಣಾಚಲ ಸಿಎಂ 2011),
ಬಿಪಿನ್ ರಾವತ್ (ಸೇನಾ ಮುಖ್ಯಸ್ಥರು 2021),
ಒ.ಪಿ.ಜಿಂದಾಲ್ – ಸುರೇಂದರ್ ಸಿಂಗ್ (ಉದ್ಯಮಿ 2025),
ವಿಜಯ್ ರೂಪಾನಿ (ಗುಜರಾತ್ ಮಾಜಿ ಸಿಎಂ – 2025)
ಘಟನೆ ಕುರಿತು ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಈ ಭಯಾನಕ ಘಟನೆಯಿಂದ ನಾನು ಸಂಪೂರ್ಣ ತತ್ತರಿಸಿದ್ದೇನೆ. ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿ ಘಟನಾ ಸ್ಥಳದಲ್ಲೇ ಇರುವಂತೆ ಸೂಚಿಸಿದ್ದಾರೆ. ಈ ಸಮಯದಲ್ಲಿ ನಾನು ಪ್ರಯಾಣಿಕರು ಮತ್ತು ಅವರ ಪರಿವಾರದವರ ಬಗ್ಗೆಯಷ್ಟೇ ಯೋಚಿಸಬಲ್ಲೆ ಹಲವು ಏಜೆನ್ಸಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
MLA Vinay Kulkarni ಶಾಸಕ ವಿನಯ್ ಕುಲಕರ್ಣಿ ಮತ್ತೆ ಸಿಬಿಐ ವಶಕ್ಕೆ, ಜೈಲ್ಗೆ ಶಿಫ್ಟ್