newsics.com
ಸ್ನೇಹಿತೆಯ ಅಪಾರ್ಟ್‌ಮೆಂಟ್‌ನ 21ನೇ ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯ ಹಿಂಜವಾಡಿ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಅಭೀಪ್ಸಾ ಭಾವುಸಾಹೇಬ್ ಕೋಟಿಂಭಿರೇ ಎಂದು ಗುರುತಿಸಲಾಗಿದೆ. ಮೇ 31ರಂದು ಹಿಂಜವಾಡಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ರಾತ್ರಿ ಆಕಸ್ಮಿಕ ಸಾವಿನ ವರದಿ ದಾಖಲಾಗಿದೆ.
ಅಂದು ಬೆಳಗ್ಗೆ 4:30ರ ಸುಮಾರಿಗೆ ಅಭೀಪ್ಸಾ ದ್ವಿಚಕ್ರ ವಾಹನದಲ್ಲಿ ಕ್ರೌನ್ ಗ್ರೀನ್ ಸೊಸೈಟಿಗೆ ಬಂದಿದ್ದರು. ನಂತರ ಅವರು ತಮ್ಮ ಸ್ನೇಹಿತೆಯ ನಿವಾಸವಿರುವ 21ನೇ ಮಹಡಿಗೆ ತೆರಳಿದ್ದು, ಅಲ್ಲಿಂದ ಜಿಗಿದಿದ್ದಾರೆ.
ಅವರು ಲಿಫ್ಟ್ ಮೂಲಕ 21ನೇ ಮಹಡಿಗೆ ಹೋಗಿದ್ದು, ಸುಮಾರು 4:42ರ ಸುಮಾರಿಗೆ ಜಿಗಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಪತ್ತೆಯಾದ ದ್ವಿಚಕ್ರ ವಾಹನದ ಮೂಲಕ ಅವರ ದೇಹವನ್ನು ಗುರುತಿಸಲಾಗಿದೆ.
ಆತ್ಮಹತ್ಯೆಗೂ ಕೆಲವೇ ನಿಮಿಷಗಳ ಮೊದಲು ಪುಣೆ ಟೆಕ್ಕಿ 21ನೇ ಮಹಡಿಯ ಕಟ್ಟಡದಿಂದ ಜಿಗಿಯುವ ಸಿಸಿಟಿವಿ ದೃಶ್ಯಾವಳಿ ಈಗ ಲಭ್ಯವಾಗಿದ್ದು, ಅದರಲ್ಲಿ ಅವರು ಲಿಫ್ಟ್‌ಗೆ ಪ್ರವೇಶಿಸುವಾಗ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡಿರುವುದು ಕಂಡುಬಂದಿದೆ.