ಟೀಂ ಇಂಡಿಯಾದ ಮಾಜಿ ಆಟಗಾರ, ಪಿಯೂಷ್ ಚಾವ್ಲಾ ಅವರು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಲೆಗ್ ಸ್ಪಿನ್ನರ್ ಖ್ಯಾತಿಯ ಪಿಯೂಷ್ ಚಾವ್ಲಾ 2007ರ T20 ವಿಜೇತ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆಟಗಾರರಾಗಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಗುಡ್‌ಬೈ ಹೇಳಿರುವ ಪಿಯೂಷ್, ತಮ್ಮ ನಿರ್ಧಾರವನ್ನು Instagramನಲ್ಲಿ ಪೋಸ್ಟ್ ಮಾಡೋ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ.
38 ವರ್ಷದ ಪಿಯೂಷ್ ಚಾವ್ಲಾ ಅವರು ಐಪಿಎಲ್‌ನಲ್ಲಿ ಒಟ್ಟು 4 ತಂಡದ ಪರ ಆಟವಾಡಿದ್ದಾರೆ. ಪಂಜಾಬ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ ಹಾಗೂ ಮುಂಬೈ ಇಂಡಿಯನ್ಸ್ ಪರ 192 ಪಂದ್ಯಗಳನ್ನು ಆಡಿದ್ದಾರೆ.