newsics.com
ಬೆಂಗಳೂರು: ಮಂಗಳವಾರ ನಡೆದ ಪಂಜಾಬ್ ವಿರುದ್ಧದ IPL ಫೈನಲ್ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಿನ ನಶೆಯಲ್ಲಿ ಫ್ಯಾನ್ಸ್ ತೇಲಾಡಿದ್ದಾರೆ.
ಫೈನಲ್ ಮ್ಯಾಚ್ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.
ಜೂನ್ 3 ರಂದು, 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿದ ಖುಷಿಯಲ್ಲಿದ್ದ ಫ್ಯಾನ್ಸ್ ಎಣ್ಣೆ ಕಿಕ್‌ನಲ್ಲಿ ಮಿಂದೆದ್ದಿದ್ದಾರೆ.
ಬಿಯರ್ ಅಷ್ಟೇ ಅಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು ಕೂಡ ಭರ್ಜರಿಯಾಗಿ ಸೇಲ್ ಆಗಿವೆ. 127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ.
ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು. ಆದರೆ, ಮಂಗಳವಾರ ಒಂದೇ ದಿನ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ.
ಉಸಿರಾಟಕ್ಕೆ ತೊಂದರೆ ದುರಂತಕ್ಕೆ ಕಾರಣ: ವೈದ್ಯರ ಸ್ಪಷ್ಟನೆ, ಮೃತರ ವಿವರ ಇಲ್ಲಿದೆ
ಮೃತರ ಕುಟುಂಬಕ್ಕೆ10 ಲಕ್ಷ ರೂ. ಪರಿಹಾರ, ಸರ್ಕಾರದಿಂದಲೇ ಚಿಕಿತ್ಸಾ ವೆಚ್ಚ, ಡಿಸಿಯಿಂದ ತನಿಖೆಗೆ ಸಿಎಂ ಆದೇಶ