newsics.com
ಉ.ಪ್ರದೇಶ : ಎಮ್ಮೆಗಾಗಿ ಮಾಲೀಕರು ಕಿತ್ತಾಡಿಕೊಂಡಿದ್ದು, ಕೊನೆಗೆ ಮಾಲೀಕನ ಹುಡುಕಲು ಪೊಲೀಸರು ಎಮ್ಮೆಯ ಮೊರೆ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಕಂಡುಬಂದಿದೆ.
ಉತ್ತರ ಪ್ರದೇಶದ ಪ್ರತಾಪ್‍ಗಢ ಜಿಲ್ಲೆಯ ಮಹೇಶ್‍ಗಂಜ್ ಠಾಣೆಯಲ್ಲಿ ಎಮ್ಮೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಎಮ್ಮೆ ಮಾಲೀಕನೆಂದು ಕಿತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ಎಮ್ಮೆ ಯಾರದೆಂದು ಎಂದು ಕಂಡುಕೊಳ್ಳಲು ಪೊಲೀಸರು ಹೊಸ ತಂತ್ರವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ.
ರಾಯ್ ಅಸ್ಕರನ್ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಅವರ ಎಮ್ಮೆ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದು, ದಾರಿ ತಪ್ಪಿದ ಎಮ್ಮೆಯನ್ನು ಪುರೆ ಹರಿಕೇಶ್ ಗ್ರಾಮದ ನಿವಾಸಿ ಹನುಮಾನ್ ಸರೋಜ್ ಎಂಬವರು ಕಟ್ಟಿಹಾಕಿಕೊಂಡಿದ್ದರು.
ಮೂರು ದಿನಗಳ ನಂತರ ನಂದಲಾಲ್ ತಮ್ಮ ಎಮ್ಮೆಯನ್ನು ಹನುಮಾನ್ ಮನೆಯಲ್ಲಿ ಪತ್ತೆಹಚ್ಚಿದ್ದರು. ಆದರೆ ಹನುಮಾನ್ ಎಮ್ಮೆಯನ್ನು ಹಿಂದಿರುಗಿಸಲು ನಿರಾಕರಿಸಿದರು. ನಂತರ ನಂದಲಾಲ್ ಮಹೇಶ್‍ಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ.
ಎಮ್ಮೆಯ ನಿಜವಾದ ಮಾಲೀಕ ಯಾರೆಂದು ಕಂಡುಹಿಡಿಯೋದು
ಪಂಚಾಯತಿಯಿಂದಲೂ ಸಾಧ್ಯವಾಗದ ಕಾರಣ, ಪೊಲೀಸರು ತಮ್ಮ ಮಾಲೀಕನನ್ನು ಪತ್ತೆಹಚ್ಚುವ ನಿರ್ಧಾರವನ್ನು ಎಮ್ಮೆಗೆ ಬಿಟ್ಟರು. ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಟ್ಟರು. ಸ್ವಲ್ಪ ಸಮಯದ ನಂತರ, ಎಮ್ಮೆ ತನ್ನ ಮಾಲೀಕರಾದ ನಂದಲಾಲ್ ಸರೋಜ್ ಮನೆಗೆ ನಡೆದುಕೊಂಡು ಹೋಯಿತು. ಆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಬಳಿಕ ಎಮ್ಮೆ ಮಾಲೀಕ ನಾನೇ ಎಂದು ಬೊಗಳೆ ಬಿಡುತ್ತಿದ್ದ ಹನುಮಾನ್ ಅವರನ್ನು ಗ್ರಾಮಸ್ಥರು ಮತ್ತು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.