Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > T B Dam ಗುಜರಾತ್ ಕಂಪನಿಯಿಂದ ಟಿಬಿ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ಬದಲಾವಣೆ: 15 ತಿಂಗಳೊಳಗೆ ಕಾಮಗಾರಿ ಪೂರ್ಣ
ಕರ್ನಾಟಕದೇಶಪ್ರಮುಖ

T B Dam ಗುಜರಾತ್ ಕಂಪನಿಯಿಂದ ಟಿಬಿ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ಬದಲಾವಣೆ: 15 ತಿಂಗಳೊಳಗೆ ಕಾಮಗಾರಿ ಪೂರ್ಣ

Share
2 Min Read
SHARE

newsics.com

ವಿಜಯನಗರ: ತುಂಗಭದ್ರಾ ಜಲಾಶಯದ ಎಲ್ಲ 32 ಕ್ರಸ್ಟ್ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

52 ಕೋಟಿ ರೂ. ಅಂದಾಜು ಮೊತ್ತದಲ್ಲಿ ನೂತನ ಗೇಟ್‌ಗಳ ನಿರ್ಮಾಣಕ್ಕೆ ಒಪ್ಪಿರುವ ಗುಜರಾತ್ ಮೂಲದ ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈ.ಲಿ. ಮುಂದಿನ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಿದೆ.

ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಮೂರು ರಾಜ್ಯ ಸರ್ಕಾರಗಳ ಒಪ್ಪಿಗೆಯೊಂದಿಗೆ ಜಲಾಶಯದ ಗೇಟ್‌ಗಳ ಬದಲಾವಣೆಗಾಗಿ ಟಿ.ಬಿ. ಬೋರ್ಡ್ ಅಧಿಕಾರಿಗಳು ಕಳೆದ ತಿಂಗಳು ನಡೆಸಿದ್ದ ಟೆಂಡರ್ ಕರೆದಿದ್ದರು. ಈ ವೇಳೆ ಗುಜರಾತ್ ಮೂಲದ ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈ.ಲಿ., ಅನಾರ್ ಇಂಡಸ್ಟ್ರೀಸ್ ಪ್ರೈ.ಲಿ. ಆಂಧ್ರ ಪ್ರದೇಶದ ಸ್ವಪ್ನಾ ಹಾಗೂ ತೆಲಂಗಾಣದ ಬೇಕಂ ಪ್ರೈ.ಲಿ. ಕಂಪನಿಗಳು ಅರ್ಜಿ ಸಲ್ಲಿಸಿದ್ದವು.

ಪ್ರಸ್ತಾವಿತ ಕಂಪನಿಗಳ ವರ್ಕ್ ಡನ್ ಹಾಗೂ ನಮೋದಿಸಿರುವ ದರವನ್ನು ಆಧರಿಸಿ ಟಿ.ಬಿ. ಬೋರ್ಡ್ ತಾಂತ್ರಿಕ ಅಧಿಕಾರಿಗಳು ಟೆಂಡರ್ ಅಂತಿಮಗೊಳಿಸಿದ್ದಾರೆ.

52 ಕೋಟಿ ರೂ. ಮೊತ್ತದಲ್ಲಿ ಎಲ್ಲ 32 ಕ್ರಸ್ಟ್ ಗೇಟ್‌ಗಳನ್ನು ನಿರ್ಮಿಸಲು ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈ.ಲಿ. ಟೆಂಡರ್ ಅನುಮತಿಸಿದ್ದಾರೆ. ಅಲ್ಲದೆ ಇದೇ ಕಂಪನಿ 16ನೇ ಗೇಟ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಫ್ಯಾಬ್ರಿಕೇಷನ್ ಕೆಲಸ ನಡೆಯುತ್ತಿದೆ ಎಂದು ಟಿ.ಬಿ.ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ ರೆಡ್ಡಿ ಮಾಹಿತಿ ನೀಡಿದರು.

ಬೇಸಿಗೆಯಲ್ಲೇ ಕಾಮಗಾರಿ ಪೂರ್ಣ:
ಕೊಚ್ಚಿಹೋಗಿರುವ 19ನೇ ಕ್ರಸ್ಟ್ ಗೇಟ್ ಜಾಗದಲ್ಲಿ ಹೊಸ ಗೇಟ್ ಅಳವಡಿಕೆ ಕಾರ್ಯ ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆಗೆ ಮುಂಗಾರು ಚುರುಕುಗೊಂಡು ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಲಿದ್ದು, ಇನ್ನುಳಿದ ಗೇಟ್‌ಗಳ ಅಳವಡಿಕೆ ಕಷ್ಟಕರ. ಈ ವೇಳೆ ಇನ್ನುಳಿದ ಗೇಟ್‌ಗಳನ್ನು ತಯಾರಿಸಿ ಅಳವಡಿಕೆಗೆ ಸಿದ್ಧವಿರಿಸಲಾಗುತ್ತದೆ. ಮಳೆ ಪ್ರಮಾಣ ಮತ್ತು ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ನೂತನ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾದರೂ, ಫೆಬ್ರವರಿ ಬಳಿಕ ಡ್ಯಾಂನಲ್ಲಿ ನೀರು ಕಡಿಮೆಯಾಗಲಿದ್ದು, ಬೇಸಿಗೆ ಅಂತ್ಯದೊಳಗೆ ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಟಿ.ಬಿ. ಬೋರ್ಡ್ ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸಪೇಟೆಯಲ್ಲಿರುವ ತುಂಗಭದ್ರಾ ಡ್ಯಾಂ 19ನೇ ಗೇಟ್ ಕಳೆದ ಆಗಸ್ಟ್ 10 ರಂದು ತಡರಾತ್ರಿ ಕೊಚ್ಚಿ ಹೋಗಿತ್ತು. ತುಂಬಿ ತುಳುಕುತ್ತಿದ್ದ ಜಲಾಶಯದ ನೀರು ತಡೆಯುವ ಉದ್ದೇಶದೊಂದಿಗೆ ತಾತ್ಕಾಲಿಕವಾಗಿ ಸ್ಟಾಪ್ಲರ್ ಗೇಟ್ ಅಳವಡಿಸಲಾಗಿದೆ. ಇದರಿಂದಾಗಿ ಎಲ್ಲ ಗೇಟ್‌ಗಳ ಸಾಮರ್ಥ್ಯವನ್ನು ಪರಿಶೀಲಿಸಿದ್ದ ದೆಹಲಿಯ ಡ್ಯಾಂ ಸೇಫ್ಟಿ ತಜ್ಞರ ತಂಡದ ಸಲಹೆ ಮೇರೆಗೆ ಎಲ್ಲ 32 ಗೇಟ್‌ಗಳ ಬದಲಾವಣೆಗೆ ನಿರ್ಧರಿಸಲಾಗಿದೆ.

TAGGED:Gujarat company to replace all crust gates of TB Dam: Work to be completed within 15 months
Share This Article
Facebook Twitter Copy Link Print
Previous Article Ram temple ಇಂದು ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ; ವೈರಲ್ ವಿಡಿಯೋ ನೋಡಿ
Next Article Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಚಿನ್ನದ ಬೆಲೆ ಏರಿಕೆ

Popular Posts

Gold Rate ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಚಿನ್ನದ ದರ ಭಾರಿ ಇಳಿಕೆ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ದಾಖಲೆಯ ಕುಸಿತ

1 Min Read

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ : ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ

1 Min Read

ವಾರದೊಳಗೆ 200 ವೈದ್ಯರ ಖಾಯಂ ನೇಮಕಾತಿಗೆ ಯು.ಟಿ. ಖಾದರ್ ಆದೇಶ

1 Min Read

ಸಂಗಾತಿ ಜತೆ ಜಗಳವಾಡಿತಾ ಗೊರಿಲ್ಲಾ? ಪಾಥೋ ಮೂಡ್‌ನ ವೈರಲ್ ವಿಡಿಯೋ ನೋಡಿ

1 Min Read

You Might Also Like

ದೇಶಪ್ರಮುಖವಿದೇಶ

pak helicopter crashes ಪಿಒಕೆಯಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್ ಪತನ: 21 ಸಿಬ್ಬಂದಿ ಸಾವು, ವಿಡಿಯೋ ನೋಡಿ

1 Min Read
ದೇಶಪ್ರಮುಖಮನರಂಜನೆ

ತಮಿಳು ಚಿತ್ರರಂಗವನ್ನೇ ಆಳುವ ತಲೈವಾಗೆ ಭಿಕ್ಷೆ ಕೊಟ್ಟಿದ್ಯಾಕೆ ಆ ಮಹಿಳೆ?

2 Min Read
ಕರ್ನಾಟಕಪ್ರಮುಖಮನರಂಜನೆ

ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ

1 Min Read
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?