Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Bullet Train ಬುಲೆಟ್ ರೈಲು ರೆಡಿ, ಪ್ರಾಯೋಗಿಕ ಪರೀಕ್ಷೆ ಆರಂಭ
ದೇಶಪ್ರಮುಖವಿದೇಶ

Bullet Train ಬುಲೆಟ್ ರೈಲು ರೆಡಿ, ಪ್ರಾಯೋಗಿಕ ಪರೀಕ್ಷೆ ಆರಂಭ

Share
2 Min Read
SHARE

newsics.com

ಟೋಕಿಯೋ (ಜಪಾನ್): ಭಾರತಕ್ಕೆ ಬುಲೆಟ್ ರೈಲು ಬರುವ ದಿನ ಹತ್ತಿರವಾಗುತ್ತಿದೆ. ಜಪಾನ್‌ ಸಹಯೋಗದಲ್ಲಿ ಭಾರತಕ್ಕೆ ಬುಲೆಟ್ ಟ್ರೇನ್ ಬರಲಿದ್ದು, ಮುಂಬೈ ಹಾಗೂ ಅಹಮದಾಬಾದ್‌ ನಡುವೆ ಭಾರತದ ಮೊದಲ ಬುಲೆಟ್ ಟ್ರೇನ್ ಸಂಚರಿಸಲಿದೆ.

ಭಾರತದ ಮುಂಬೈ ಮತ್ತು ಅಹಮದಾಬಾದ್ ನಡುವೆ ಚಲಿಸುವ ಬುಲೆಟ್ ರೈಲಿನ ಪ್ರಾಯೋಗಿಕ ಪರೀಕ್ಷೆ ಜಪಾನ್‌ನಲ್ಲಿ ಆರಂಭವಾಗಿದೆ.

ಜಪಾನ್ ಭಾರತಕ್ಕೆ ಎರಡು ಶಿಂಕಾನ್ಸೆನ್ ರೈಲು ಸೆಟ್‌ಗಳನ್ನು ಉಡುಗೊರೆಯಾಗಿ ನೀಡಲಿದೆ. ಒಂದು E5 ಸರಣಿಯ ಬುಲೆಟ್ ರೈಲು ಮತ್ತು ಇನ್ನೊಂದು E3 ಸರಣಿಯ ರೈಲುಗಳು.

ಜಪಾನ್‌ನಲ್ಲಿ ಬುಲೆಟ್ ರೈಲಿನ ಪ್ರಾಯೋಗಿಕ ಆರಂಭವನ್ನು ಒಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.  ಈ ರೈಲುಗಳನ್ನು ಮುಂದಿನ ವರ್ಷ ಅಂದರೆ 2026ರ ಆರಂಭದಲ್ಲಿ ಭಾರತಕ್ಕೆ ಬರಲಿವೆ.

ಈ ರೈಲುಗಳ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಜಪಾನ್‌ನಲ್ಲಿ ಭಾನುವಾರ ನಡೆಸಲಾಯಿತು.

ಭಾರತಕ್ಕೆ ಬುಲೆಟ್ ರೈಲು ಬರುವ ಮೊದಲ ಇಲ್ಲಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮವು ಮುಂಬೈ ಮತ್ತು ಅಹಮದಾಬಾದ್ ನಡುವೆ 508 ಕಿ.ಮೀ. ಭಾರತದ ಮೊದಲ ಹೈ-ಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸುತ್ತಿದೆ. ಇದರ 352 ಕಿ.ಮೀ. ಮಾರ್ಗವು ಗುಜರಾತ್‌ನ ಒಂಬತ್ತು ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಮೂರು ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ.

ಈ ರೈಲುಗಳು ಜಪಾನ್‌ನಿಂದ ಭಾರತಕ್ಕೆ ಬಂದಾಗ ಅವುಗಳನ್ನು ಪರೀಕ್ಷಿಸಲಾಗುತ್ತದೆ. ಈ ರೈಲುಗಳು ಭಾರತೀಯ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಹಲವಾರು ಹಂತದ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.

ಭಾರತದಲ್ಲಿ ಬುಲೆಟ್ ರೈಲಿನ ವೇಗ ಗಂಟೆಗೆ 320 ಕಿಲೋಮೀಟರ್ ಆಗಿರುತ್ತದೆ. ಈ ರೈಲುಗಳನ್ನು 2026 ರಲ್ಲಿ ಭಾರತದಲ್ಲಿ ಪ್ರಾಯೋಗಿಕವಾಗಿ ಓಡಿಸಲಾಗುವುದು ಮತ್ತು ಈ ರೈಲುಗಳು 2029 ರ ವೇಳೆಗೆ ಸಂಪೂರ್ಣವಾಗಿ ಓಡಲು ಸಿದ್ಧವಾಗುತ್ತವೆ ಎಂದು ಹೇಳಿವೆ.

508 ಕಿ.ಮೀ ಉದ್ದದ MAHSR ಕಾರಿಡಾರ್ ಅನ್ನು ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಅಭಿವೃದ್ಧಿಪಡಿಸುತ್ತಿದೆ. ಈ ಕಾರಿಡಾರ್ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಕೇವಲ 2 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿರುತ್ತವೆ, ಅವುಗಳಲ್ಲಿ ಪ್ರಮುಖವಾದವು ಥಾಣೆ, ವಿರಾರ್, ಬೋಯಿಸರ್, ವಾಪಿ, ಸೂರತ್ ಮತ್ತು ವಡೋದರಾ. ಈ ರೈಲು ಮತ್ತು ಮಾರ್ಗದಲ್ಲಿ ಜಪಾನಿನ ತಂತ್ರಜ್ಞಾನವನ್ನು ಬಳಸಲಾಗಿದೆ.

300 ಕಿ.ಮೀ. ರಚನೆಯಲ್ಲಿ, 257.4 ಕಿ.ಮೀ.ಗಳನ್ನು ಪೂರ್ಣ ಸ್ಪ್ಯಾನ್ ಲಾಂಚಿಂಗ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ.

ಸೂರತ್‌ನಲ್ಲಿ ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣ ಬಹುತೇಕ ಸಿದ್ಧವಾಗಿದೆ. ಅದೇ ಸಮಯದಲ್ಲಿ, ಉಳಿದ ಕೆಲಸಗಳನ್ನು ಸಹ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಗುಜರಾತ್‌ನಲ್ಲಿ ಸುಮಾರು 157 ಕಿ.ಮೀ. ಟ್ರ್ಯಾಕ್ ಬೆಡ್ ಅನ್ನು ಹಾಕಲಾಗಿದೆ.

ಭಾರತದಲ್ಲಿ ಬುಲೆಟ್ ರೈಲು ಬಂದ ನಂತರ, ಉದ್ಯೋಗಾವಕಾಶಗಳು ವೇಗವಾಗಿ ತೆರೆದುಕೊಳ್ಳುತ್ತವೆ. ಈ ಯೋಜನೆಯ ವೆಚ್ಚದ ಸುಮಾರು 80 ಪ್ರತಿಶತವನ್ನು ಜಪಾನ್ ಕಡಿಮೆ ಬಡ್ಡಿದರದಲ್ಲಿ ಯೆನ್ ಸಾಲದ ಮೂಲಕ ಭರಿಸುತ್ತಿದೆ.

 

study report ನೀವು ರಾತ್ರಿ ತಡವಾಗಿ ಮಲಗ್ತೀರಾ? ಹಾಗಾದ್ರೆ ನಿಮಗೆ ಅಪಾಯ ನಿಶ್ಚಿತ

TAGGED:#bullet #train #ready #trial #test #started #japan #mumbai #ahamadabad #maharashtra #gujarath #track #news #rail #newsics
Share This Article
Facebook Twitter Copy Link Print
Previous Article study report ನೀವು ರಾತ್ರಿ ತಡವಾಗಿ ಮಲಗ್ತೀರಾ? ಹಾಗಾದ್ರೆ ನಿಮಗೆ ಅಪಾಯ ನಿಶ್ಚಿತ
Next Article Today’s prediction ಇಂದಿನ ರಾಶಿ ಭವಿಷ್ಯ, 02-06-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

You Might Also Like

ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read
ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?