newsics.com
ಡಿವೋರ್ಸ್ ಪಡೆದಿದ್ದರೂ ಕೂಡ ಪಾಲಕರಾಗಿ ತಮ್ಮ ಜವಾಬ್ದಾರಿಯನ್ನು ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಅವರು ನಿಭಾಯಿಸುತ್ತಿದ್ದಾರೆ. ಹಿರಿಯ ಮಗ ಯಾತ್ರ ಸಲುವಾಗಿ ಐಶ್ವರ್ಯಾ ಮತ್ತು ಧನುಷ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.
ಯಾತ್ರ ಈಗ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮಗನ ಹೈಸ್ಕೂಲ್ ಗ್ರಾಜುಯೇಷನ್ ಕಾರ್ಯಕ್ರಮದಲ್ಲಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಪಾಲ್ಗೊಂಡಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವ ಸಲುವಾಗಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಧನುಷ್, ಐಶ್ವರ್ಯಾ ಹಾಗೂ ಯಾತ್ರ ಒಟ್ಟಿಗೆ ಇರುವ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಧನುಷ್ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಹೆಮ್ಮೆಯ ಪೋಷಕರು’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಮಗನನ್ನು ತಬ್ಬಿಕೊಂಡು ಧನುಷ್ ಮತ್ತು ಐಶ್ವರ್ಯಾ ಬೆನ್ನು ತಟ್ಟಿದ್ದಾರೆ. ‘ಅಭಿನಂದನೆಗಳು, ನಿಮ್ಮನ್ನು ಮತ್ತೆ ಜೊತೆಯಾಗಿ ನೋಡಲು ಬಹಳ ಖುಷಿ ಆಗುತ್ತಿದೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ಧನುಷ್ ಅವರು ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆ 2004ರಲ್ಲಿ ಮದುವೆ ಆಗಿದ್ದರು. 20 ವರ್ಷಗಳ ಬಳಿಕ, ಅಂದರೆ 2024ರಲ್ಲಿ ಅವರು ವಿಚ್ಛೇದನ ಪಡೆದುಕೊಂಡರು. ಈ ಜೋಡಿಗೆ ಯಾತ್ರ ಮತ್ತು ಲಿಂಗ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ.
https://www.instagram.com/p/DKUfUNvRg_L/?igsh=MTBpeWZ0NmxkMWpuNg==